ಚಿಕ್ಕಮಗಳೂರು,27- ಜಿಲ್ಲೆಯ ರೈತರೊಬ್ಬರಿಗೆ ಕಳೆದ 13 ವರ್ಷಗಳ ಬಳಿಕ ಬರೋಬ್ಬರಿ ಮೂರು ಲಕ್ಷ ಇಪ್ಪತ್ತು ಸಾವಿರ ರೂ. ವಿದ್ಯುತ್ ಬಿಲ್ ಬಂದಿದ್ದು, ಇಲಾಖೆಯ ವಿರುದ್ಧ ರೈತ ಆಕ್ರೋಶ ಹೊರ ಹಾಕಿದ್ದಾನೆ. ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ತಾಲೂಕಿನ ಆಲ್ಲೂರು ಸಮೀಪದ ವಿಕ್ಕರಣೆ ಗ್ರಾಮದ ರೈತ ಉಮೇಶ್ ಎಂಬುವರಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬಾರೀ ಮೊತ್ತದ ಬಿಲ್ ನೀಡಲಾಗಿದೆ.
ರೈತ ಉಮೇಶ್ ಜಮೀನಿನಲ್ಲಿ ಅಡಿಕೆ, ಕಾಫಿ ಬೆಳೆಗಳನ್ನು ಬೆಳೆಯುತ್ತಿದ್ದು ನೀರು ಹಾಯಿಸಲು 10 ಎಚ್.ಪಿ. ಪಂಪ್ಲೆಟ್ ಆಳ ವಡಿಸಿ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ| ಬಂಗಾರಪ್ಪ ಅವರ ಕಾಲದಿಂದಲೂ 10 ಹೆಚ್.ಪಿ. ಪಂಪ್ಪೆಟ್ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಆದರೆ, ಈಗ ಏಕೆ ವಿದ್ಯುತ್ ಬಿಲ್ ಕಟ್ಟಿ ಎಂದು ನೋಟಿಸ್ ಕಳಿಸಿ ದ್ದೀರಾ ಎಂದು ಅಈ ಕಾರಿಗಳನ್ನು ಪ್ರಶ್ನಿಸಿದರೇ ಅಽ ಕಾರಿಗಳು ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಇಲ್ಲವೆಂದು ಉತ್ತರಿಸುತ್ತಾರೆಂದು ತಿಳಿಸಿದ್ದಾರೆ.
ಆ ಕಾರಿಗಳ ಈ ನಡೆ ಕಾಫಿ ಬೆಳೆಗಾರರ ಕಂಗೆಣ್ಣಿಗೆ ಗುರಿಯಾಗಿದ್ದು, 13ವರ್ಷಗಳ ಬಳಿಕ ಮೂರು ಲಕ್ಷ ಇಪ್ಪತ್ತು ಸಾವಿರ ರೂ. ವಿದ್ಯುತ್ ಬಿಲನ್ನು 15 ದಿನಗಳಲ್ಲಿ ಪಾವತಿ ಮಾಡುವಂತೆ ನೋಟಿಸ್ ನೀಡಿದ್ದು, ಹಣ ಪಾವತಿಸದಿದ್ದರೇ ವಿದ್ಯುತ್ ಸಂಪರ್ಕ ಕಟ್ ಮಾಡುತ್ತೇವೆಂದು ತಿಳಿಸಿದ್ದು ಅಂ ಕಾರಿಗಳ ಈ ನಡೆಗೆ ರೈತ ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.