ತರೀಕೆರೆ,ಫೆ.28- ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ಪಾಳು ಬಿದ್ದ ಸುಮಾರು 70 ಅಡಿ ಆಳದ ನೀರಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಎರಡು ಬೆಕ್ಕುಗಳನ್ನು ತರೀಕೆರೆ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯರು ಕರೆ ನೀಡಿದ ತಕ್ಷಣ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿ ರೆಸ್ಕೂ ಹರ್ನೆಸ್ ಬೆಲ್ಟ್ ಮತ್ತು ರೋಪ್ ಸಹಾಯದಿಂದ ಬಾವಿ ಒಳಗೆ ಇಳಿದು 2 ಬೆಕ್ಕುಗಳನ್ನು ಜೀವಂತವಾಗಿ ಹಿಡಿದು ರಕ್ಷಣೆ ಮಾಡಿ ಸ್ಥಳೀಯರಿಗೆ ಒಪ್ಪಿಸಿದ್ದಾರೆಂದು ವರದಿಯಾಗಿದೆ.
ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಜಿ.ಜಿ. ನಾಗೇಂದ್ರ, ಪ್ರಮುಖ ಅಗ್ನಿಶಾಮಕ ಹರೀಶ್ ಕುಮಾರ್, ಸಿಬ್ಬಂದಿಗಳಾದ ಶಬೀರ್, ಉಮೇಶ್ ಕೆ.ಎಮ್., ಪುನೀತ್, ಸಂತೋಷ್, ಧನುಷ್ ಯಾದವ್ ಇದ್ದರು.