Saturday, March 1, 2025
Homeರಾಷ್ಟ್ರೀಯ | Nationalಅತ್ಯಾಚಾರದ ಸಂದರ್ಭದಲ್ಲಿ ಮಹಿಳೆ ಕೂಗಿಕೊಳ್ಳಬೇಕಿತ್ತು ; ವಕೀಲರ ಮೊಂಡು ವಾದ

ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆ ಕೂಗಿಕೊಳ್ಳಬೇಕಿತ್ತು ; ವಕೀಲರ ಮೊಂಡು ವಾದ

She Did Not Scream for Help: Defense Argues Against Rape Allegation in Swargate Depot Case

ಪುಣೆ, ಮಾ. 1: ಪುಣೆಯಲ್ಲಿ ಬಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ತಪ್ಪು ಏನು ಇಲ್ಲ. ಸಂತ್ರಸ್ಥ ಮಹಿಳೆ ಆ ಸಂದರ್ಭದಲ್ಲಿ ಸಹಾಯಕ್ಕಾಗಿ ಕೂಗಿಕೊಳ್ಳಬಹುದಿತ್ತು ಎದು ದತ್ತಾತ್ರೇಯ ರಾಮದಾಸ್ ಗಡೆ ಪರ ವಕೀಲ ನ್ಯಾಯಲಯದಲ್ಲಿ ಮೊಂಡು ವಾದ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಬಲವಂತವಾಗಿ ಏನೂ ಆಗಿಲ್ಲ, ಆಕೆ ಕೂಗಿಕೊಂಡು ಸಹಾಯ ಕೋರಬಹುದಿತ್ತು ಎಂದು ವಕೀಲ ವಾಜಿದ್ ಖಾನ್ ವಾದಿಸಿದ್ದಾರೆ. ಏನೇ ನಡೆದಿದ್ದರೂ ಅದು ಇಬ್ಬರ ನಡುವಿನ ಒಪ್ಪಿಗೆಯ ನಂತರವೇ ಸಂಭವಿಸಿದೆ, ಪುಣೆ ಪೊಲೀಸರು ಗಡೆಯನ್ನು ಬಂಧಿಸಲು ಶಿರೂರ್ ತಹಸಿಲ್‌ನಲ್ಲಿ ಡೋನ್‌ಗಳು ಮತ್ತು ಶ್ವಾನ ದಳಗಳನ್ನು ನಿಯೋಜಿಸಿದ್ದರು.

ಪುಣೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವ ಶಾಹಿ ಬಸ್ಸಿ ನೊಳಗೆ ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.
ಬೆಳಗ್ಗೆ 5.45 ರ ಸುಮಾರಿಗೆ ಪಕ್ಕದ ಸತಾರ ಜಿಲ್ಲೆಯ ಫಾಲ್ಟನ್‌ ಗೆ ಹೋಗುವ ಬಸ್‌ಗಾಗಿ ಒಂದು ಪ್ಲಾಟ್‌ ಫಾರ್ಮ್‌ ನಲ್ಲಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಹತ್ತಿರ ಬಂದು ಅವಳನ್ನು ಅಕ್ಕಾ ಎಂದು ಕರೆದು ಮಾತನಾಡಲು ಶುರು ಮಾಡಿದ್ದ. ಸತಾರಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್ ಫಾರ್ಮ್‌ಗೆ ಬಂದಿದೆ ಎಂದು ಹೇಳಿದ್ದ, ವಿಶಾಲವಾದ ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಖಾಲಿ ಶಿವ ಶಾಹಿ ಎಸಿ ಬಸ್‌ಗೆ ಅವಳನ್ನು ಕರೆದೊಯ್ದು ಅತ್ಯಾಚಾರ ನಡೆಸಿ ಪರಾರಿಯಾಗಿದ್ದ.

ಆರೋಪಿಯು ಮಹಿಳೆಗೆ ತಾನು ಫಾಲ್ಟನ್ ಬಸ್‌ನ ಕಂಡಕ್ಟರ್ ಎಂದು ಹೇಳಿದ್ದಾನೆ. ಆದ್ದರಿಂದ ಆಕೆ ಅವನನ್ನು ನಂಬಿ ಅವನೊಂದಿಗೆ ಹೋಗಿದ್ದರು. ಪುಣೆಯ ಶಿರೂರ್ ತಹಸಿಲ್‌ನ ಹಳ್ಳಿಯೊಂದರಲ್ಲಿ ಮಧ್ಯರಾತ್ರಿಯ ಸುಮಾರಿಗೆ ಬಂಧನ ನಡೆದಿದೆ. ರಾಮದಾಸ್ ಗಡೆ ಶಿರೂರ್‌ನ ಜಮೀನಿನಲ್ಲಿ ಅಡಗಿಕೊಂಡಿರುವುದು ಕಂಡುಬಂದಿತ್ತು.

RELATED ARTICLES

Latest News