ಮುಟ್ಟಿನ ರಕ್ತಕ್ಕಾಗಿ ಮಹಿಳೆಗೆ ಒತ್ತಾಯ : 7 ಜನರ ವಿರುದ್ಧ ಕೇಸ್

ಪೂನಾ,ಮಾ.11-ಅಘೋರಿ ಅಭ್ಯಾಸಕ್ಕಾಗಿ ಮಹಿಳೆಯೊಬ್ಬರ ಮುಟ್ಟಿನ ರಕ್ತ ಪಡೆದ ಆರೋಪದ ಮೇಲೆ ಆಕೆಯ ಪತಿ, ಅತ್ತೆ,ಮಾವ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಪೂನಾದ ವಿಶ್ರಾಂತ್‍ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಹಿಳೆಯಿಂದ ಬಲವಂತವಾಗಿ ಮುಟ್ಟಿನ ರಕ್ತ ಪಡೆದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ದತ್ತಾತ್ರೇಯ ಬಾಪ್ಕಾ ತಿಳಿಸಿದ್ದಾರೆ. ಬೀಡ್ ಜಿಲ್ಲೆಯಲ್ಲಿ 2019 ರಲ್ಲಿ ಮದುವೆಯಾದಾಗಿನಿಂದ ನನ್ನ ಪತಿ ಹಾಗೂ ಆತನ ಮನೆಯವರು ಮದುವೆಯಾದ ದಿನದಿಂದಲೂ ನನಗೆ ಮುಟ್ಟಿನ ರಕ್ತ […]

ತುಂಬಿತುಳುಕುತ್ತಿರುವ ಯರವಾಡ ಜೈಲು

ಪುಣೆ,. 12- ಪುಣೆಯ ಯರವಾಡ ಕೇಂದ್ರ ಕಾರಾಗೃಹ ಕೈದಿಗಳಿಂದ ತುಂಬಿ ಹೋಗಿದ್ದು, ಹೆಚ್ಚುವರಿ ಬ್ಯಾರಕ್‍ಗಳನ್ನು ನಿರ್ಮಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿರುವುದಾಗಿ ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜೈಲುಗಳು) ಅಮಿತಾಭ್ ಗುಪ್ತಾ ಹೇಳಿದ್ದಾರೆ. ಮಕರ ಸಂಕ್ರಾಂತಿ ವಿಶೇಷ ಸಂದರ್ಭದಲ್ಲಿ ಕೈದಿಗಳು ತಯಾರಿಸಿದ ವಿವಿಧ ವಸ್ತುಗಳು ಮತ್ತು ಉತ್ಪನ್ನಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೈದಿಗಳು ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಶೀಘ್ರದಲ್ಲೇ ಇ-ಕಾಮರ್ಸ್ ವೆಬ್‍ಸೈಟ್‍ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದರು. 2022ರ ನವೆಂಬರ್ ವೇಳೆ ಯರವಾಡ ಜೈಲಿನಲ್ಲಿ […]

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ಪುಣೆ,ನ.21- ಸರಣಿ ಅಪಘಾತ ಸಂಭವಿಸಿ ಸುಮಾರು 48 ವಾಹನಗಳು ಜಖಂಗೊಂಡು 30 ಮಂದಿ ಗಾಯಗೊಂಡಿರುವ ಘಟನೆ ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನವಿಲೆ ಸೇತುವೆ ಬಳಿ ಸಂಭವಿಸಿದೆ. ನಿನ್ನೆ ರಾತ್ರಿ ಪುಣೆ ಮಾರ್ಗವಾಗಿ ತೆರಳುತ್ತಿದ್ದ ಟ್ರಕ್‍ವೊಂದು ಬ್ರೇಕ್ ವೈಫಲ್ಯದಿಂದ ಈ ಸರಣಿ ಅಪಘಾತ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೊ ಪಾಲಿಟಿನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಕ್ಷಣಾ ತಂಡ ತೆರಳಿ ಕಾರ್ಯಾಚರಣೆ ನಡೆಸಿ ವಾಹನಗಳನ್ನು ತೆರವುಗೊಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ […]

ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಉಚಿತ ಚಿಕಿತ್ಸೆ

ಪುಣೆ, ನ.6-ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಉಚಿತ ಪ್ರಸವ ಚಿಕಿತ್ಸೆ ಜೊತೆಗೆ ಯಾವುದೇ ಶುಲ್ಕ ಪಡೆಯದೆ ಸನ್ಮನಿಸುತ್ತಾರೆ. ಪುಣೆಯ ವೈದ್ಯರೊಬ್ಬರು ಹೆಣ್ಣು ಮಗುವನ್ನು ಉಳಿಸುವ ಧೇಯದೊಂದಿಗೆ ಕಳೆದ 11 ವರ್ಷದಿಂದ ಈ ಉಚಿತ ಸೇವೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದ ಹಡಪ್ಸರ್ ಪ್ರದೇಶದಲ್ಲಿ ಹೆರಿಗೆ-ಕಮï-ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ ಗಣೇಶ್ ರಾಖ್ ಅವರು ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶುಹತ್ಯೆಯ ವಿರುದ್ಧ ಜಾಗೃತಿ ಮೂಡಿಸಲು ನಡೆಸಿರುವ ಅಬಿಯಾನ ಗಮನ ಸೆಳೆದಿದೆ. ಕಳೆದ 11 ವರ್ಷಗಳಲ್ಲಿ 2,400 ಕ್ಕೂ […]

ಪುಣೆಯಲ್ಲೂ ಆತಂಕ ಮೂಡಿಸಿದ ಲುಂಪಿ ಕಾಯಿಲೆ

ನವದೆಹಲಿ, ಆ.26 – ಗುಜರಾತ್ ಸೇರಿದಂತೆ ಎಂಟು ರಾಜ್ಯಗಳು ಹಾಗೂ ಹಲವು ಕೇಂದ್ರಾಡಳಿತ ಪ್ರದೇಶಗಳನ್ನು ಕಾಡಿರುವ ಜಾನುವಾರುಗಳ ಚರ್ಮದ ಕಾಯಿಲೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲೂ ಪತ್ತೆಯಾಗಿದೆ. ಕಳೆದ ಎರಡು ತಿಂಗಳಿನಿಂದ ಲುಂಪಿ ಚರ್ಮದ ಕಾಯಿಲೆ ವಿವಿಧ ರಾಜ್ಯಗಳಲ್ಲಿ ಸುಮಾರು 7,300ಜಾನುವಾರುಗಳ ಸಾವಿಗೆ ಕಾರಣವಾಗಿದೆ. 2019ರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಒಂದಷ್ಟು ದಿನ ನಿಷ್ಕ್ರೀಯಗೊಂಡಿತ್ತು. ಕಳೆದ ಎರಡು ತಿಂಗಳಿನಿಂದ ದಿಢೀರ್ ಹೆಚ್ಚಾಗಿದೆ. ಈ ಸೋಂಕಿನಿಂದ ಪಂಜಾಬ್‍ನಲ್ಲಿ 3,359, ರಾಜಸ್ತಾನದಲ್ಲಿ 2111, ಗುಜರಾತ್‍ನಲ್ಲಿ 1,679, ಜಮ್ಮು ಮತ್ತು ಕಾಶ್ಮೀರದಲ್ಲಿ 62, […]