Monday, October 14, 2024
Homeರಾಷ್ಟ್ರೀಯ | Nationalಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್‌ ಪತನ, ಮೂವರ ಸಾವು

ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್‌ ಪತನ, ಮೂವರ ಸಾವು

3 dead as Mumbai-bound chopper crashes in Pune’s Bavdhan area

ಪುಣೆ,ಅ.2-ಖಾಸಗಿ ಹೆಲಿಕಾಪ್ಟರ್‌ ಪತನಗೊಂಡು ಇಬ್ಬರು ಪೈಲಟ್‌ಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಬವ್‌ಧಾನ್‌ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದೆ. ಹೆಲಿಕಾಪ್ಟರ್‌ ಪತನಗೊಂಡು ಕೂಡಲೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದೆ.ಬೆಳಗ್ಗೆ 6.45ಕ್ಕೆ ಈ ಘಟನೆ ನಡೆದಿದೆ ಎಂದು ಪಿಂಪ್ರಿ ಚಿಂಚ್‌ವಾಡ್‌ ಪೊಲೀಸರು ತಿಳಿಸಿದ್ದಾರೆ.

ಪೂಣೆ ಬಳಿಯ ಆಕ್ಸ್ ಫರ್ಡ್‌ ಗಾಲ್ಫ್ ಕೋರ್ಸ್‌ನಲ್ಲಿರುವ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ ಟೇಕ್‌ ಆಫ್‌ಆಗಿ ಮುಂಬೈನ ಜುಹುಗೆ ತೆರಳುವಾಗ ಬವ್‌ಧಾನ್‌ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಏಕಾಏಕಿ ನಿಯಂತ್ರಣ ಕಳೆದುಕೊಂಡು ಕೆಳಗೆ ಇಳಿದು ನೆಲಕ್ಕೆ ಅಪ್ಪಳಿಸಿದೆ ಎಂದು ಹಿಂಜೆವಾಡಿ ಪೊಲೀಸ್‌‍ ಠಾಣೆಯ ಹಿರಿಯ ಇನ್ಸ್ ಪೆಕ್ಟರ್‌ ಕನ್ಹಯ್ಯಾ ಥೋರಟ್‌ ಹೇಳಿದ್ದಾರೆ.

ಹೆಲಿಕಾಪ್ಟರ್‌ಅನ್ನು ಪೈಲಟ್‌ಗಳಾದ ಪರಮ್‌ಜಿತ್‌ಸಿಂಗ್‌ ಮತ್ತು ಜಿ ಕೆ ಪಿಳ್ಳೈ ಚಾಲನೆ ಮಾಡುತ್ತಿದ್ದರು ಮತ್ತು ಅವರೊಂದಿಗೆ ಇಂಜಿನಿಯರ್‌ ಪ್ರೀತಮ್‌ ಭಾರದ್ವಾಜ್‌ ಇದ್ದರು ಎಂದು ಗೊತ್ತಾಗಿದೆ.ಅಗ್ನಿಶಾಮಕ ದಳದ ವಾಹನಗಳೊಂದಿಗೆ ಪೊಲೀಸ್‌‍ ತಂಡಗಳು ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಾಚರಣೆ ನಡೆಸಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಹೆಲಿಕಾಪ್ಟಾರ್‌ ದೆಹಲಿ ಮೂಲದ ಖಾಸಗಿ ವಿಮಾನಯಾನ ಸಂಸ್ಥೆ ಹೆರಿಟೇಜ್‌ ಏವಿಯೇಷನ್‌ಗೆ ಸೇರಿದೆ ಮತ್ತು ವಿಟಿ ಇವಿವಿ ನೋಂದಣಿ ಸಂಖ್ಯೆಯನ್ನು ಹೊಂದಿತ್ತು ಎಂದು ತಿಳಿದುಬಂದಿದ್ದು , ಹೆಲಿಕಾಪ್ಟರ್‌ ಅನ್ನು ನ್ಯಾಷನಲಿಸ್ಟ್‌ ಕಾಂಗ್ರೆಸ್‌‍ ಪಾರ್ಟಿ (ಎನ್‌ಸಿಪಿ)ಬಕ್‌ ಮಾಡಿತ್ತು ಎನ್‌ಸಿಪಿ ಮುಖ್ಯಸ್ಥ ಸುನೀಲ್‌ ತಟ್ಕರೆ ಅವರು ಹೆಲಿಕಾಪ್ಟರ್‌ನಲ್ಲಿ ರಾಯಗಢಕ್ಕೆ ಭೇಟಿ ಮಾಡಬೇಕಿತ್ತು,ಆದರೆ ಪ್ರಯಾಣ ಸಮಯ ಬದಾಲಾಗಿತ್ತು.

RELATED ARTICLES

Latest News