Monday, September 16, 2024
Homeರಾಷ್ಟ್ರೀಯ | National50 ಸಾವಿರ ಲಂಚ ಪಡೆದಿದ್ದ ಡಿಸಿ ಕಚೇರಿ ಅಧಿಕಾರಿ ಅರೆಸ್ಟ್

50 ಸಾವಿರ ಲಂಚ ಪಡೆದಿದ್ದ ಡಿಸಿ ಕಚೇರಿ ಅಧಿಕಾರಿ ಅರೆಸ್ಟ್


ಪಾಲ್ಘರ್‌,ಅ 14: ಭೂ ವ್ಯವಹಾರದ ವಿಷಯದಲ್ಲಿ ವ್ಯಕ್ತಿಯೊಬ್ಬರಿಂದ 50,000 ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಡಿಸಿ ಕಚೇರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಜಮೀನಿನ ಸರ್ವೆ ಸೇರಿ ಹಲವು ವಿಷಯದ ತಕರಾರಿಗೆ ಅರ್ಜಿ ಸಲ್ಲಿಸಿದ್ದರು ಇದಕ್ಕೆ ಹಿರಿಯ ಅಧಿಕಾರಿಯೊಬ್ಬರು 1 ಲಕ್ಷಕ್ಕೆ ಬೇಡಿಕೆ ಇಟ್ಟು ನಂತರ 50 ಸಾವಿರ ನೀಡುವಂತೆ ಒತ್ತಾಯಿಸಿದ್ದರು.

ಈ ಬಗ್ಗೆ ಎಸಿಬಿಗೆ ದೂರು ನೀಡಲಾಗಿತ್ತು ಇದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿಢೀರ್‌ ದಾಳಿ ನಡೆಸಿ ದೂರುದಾರರಿಂದ ಲಂಚದ ಮೊತ್ತವನ್ನು ಸ್ವೀಕರಿಸುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಜಿಲ್ಲಾಧಿಕಾರಿ ಕೂಡ ಎಸಿಬಿ ಕಾರ್ಯಾಚರಣೆ ಮೆಚ್ಚಿದ್ದಾರೆ.

RELATED ARTICLES

Latest News