ನವದೆಹಲಿ,ನ.7-ಮಹಾದೇವ್ ಬೆಟ್ಟಿಂಗ್ ಆ್ಯಪ್ ಕುರಿತಂತೆ ಯಾವುದೇ ಚರ್ಚೆಗೆ ನಾನು ಸಿದ್ದ ಎಂದು ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಬಿಜೆಪಿ ಪಂಥಾಹ್ವಾನ ನೀಡಿದ್ದಾರೆ. ಛತ್ತೀಸ್‍ಗಢ ವಿಧಾನಸಭೆಗೆ ಮೊದಲ ಹಂತದ ಮತದಾನ ಆರಂಭವಾಗುತ್ತಿದ್ದಂತೆ ಮಹಾದೇವ್ ಆ್ಯಪ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಬಘೇಲ್, ತಮ್ಮ ಸರ್ಕಾರದ ಸಾಧನೆಗಳ ಕುರಿತು ಚರ್ಚೆಗೆ ಆಹ್ವಾನ, ದಿನಾಂಕ, ಸಮಯ ಮತ್ತು ಸ್ಥಳವನ್ನು ಹೆಸರಿಸಲು ಕೇಂದ್ರ ಗೃಹ ಸಚಿವರನ್ನು ಕೇಳಿಕೊಂಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರೇ, ನಾನು ನಿಮ್ಮ ಸವಾಲನ್ನು ಸ್ವೀಕರಿಸಿದ್ದೇನೆ, ಅದೇ ಪಾಂಡರಿಯಾ ಅಸೆಂಬ್ಲಿಗೆ (ಆಸನ) ನೀವು ನನಗೆ (ನನ್ನ ಸರ್ಕಾರ ಮಾಡಿದ ಕೆಲಸದ ಬಗ್ಗೆ) ಚರ್ಚೆಗೆ ಹೋಗುತ್ತೇನೆ. ನೀವು ಇನ್ನೂ ವೇದಿಕೆ, ದಿನಾಂಕ ಮತ್ತು ಸಮಯವನ್ನು ಹೇಳಿಲ್ಲ. ಆದರೆ ಸಾರ್ವಜನಿಕರು ವೇದಿಕೆಯನ್ನು ಸಿದ್ಧಪಡಿಸಿದ್ದಾರೆ ಎಂದು ಬಘೆಲ್ ಹೇಳಿದರು.
BREAKING : ಅಮೆರಿಕದ ಒತ್ತಡಕ್ಕೆ ಮಣಿದ ಇಸ್ರೇಲ್, ಯುದ್ಧದ ಅಲ್ಪ ವಿರಾಮಕ್ಕೆ ಒಪ್ಪಿಗೆ
ಎರಡು ಆಸನಗಳ ಕಪ್ಪು ಸೋಫಾದ ಛಾಯಾಚಿತ್ರ – ಇಬ್ಬರು ನಾಯಕರ ಹೆಸರನ್ನು ಹೊಂದಿರುವ ಫಲಕಗಳಿರುವ ಚಿತ್ರ ಹಾಕಿ ದಯವಿಟ್ಟು ದಿನಾಂಕ ಮತ್ತು ಸಮಯವನ್ನು ನನಗೆ ತಿಳಿಸಿ… ಎಂದು ಅವರು ಎಕ್ಸ್ ಮಾಡಿದ್ದಾರೆ. ಆದರೆ, ಬಘೇಲ್ ಅವರ ಈ ಸವಾಲಿಗೆ ಅಮಿತ್ ಶಾ ಇನ್ನು ಪ್ರತಿಕ್ರಿಯೆ ನೀಡಿಲ್ಲ.