Monday, October 7, 2024
Homeರಾಷ್ಟ್ರೀಯ | Nationalಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ

ಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ

ಐಜ್ವಾಲ್,ನ.7- ಆಡಳಿತಾರೂಢ ಎಂಎನ್‍ಎಫ್ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದರಿಂದ ಮಿಜೋರಾಂನಲ್ಲಿ ಹಂಗ್ ಅಸೆಂಬ್ಲಿ ಇರುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಝೋರಾಮ್‍ತಂಗ ಅವರು, ರಾಜ್ಯದಲ್ಲಿ ಬಿಜೆಪಿಯೊಂದಿಗೆ ತಮ್ಮ ಪಕ್ಷವು ಮೈತ್ರಿ ಹೊಂದಿಲ್ಲ ಆದರೆ, ಕೇಂದ್ರದಲ್ಲಿ ಎನ್‍ಡಿಎಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಝೋ ಬುಡಕಟ್ಟುಗಳನ್ನು ಒಗ್ಗೂಡಿಸುವ ನಮ್ಮ ಪ್ರಯತ್ನಗಳು ಪಕ್ಷಕ್ಕೆ ಚುನಾವಣಾ ಲಾಭವನ್ನು ತರುತ್ತವೆ ಎಂದು ಪ್ರತಿಪಾದಿಸಿದ ಅವರು, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಮಣಿಪುರದಿಂದ ಪಲಾಯನ ಮಾಡುವ ಜನರು ತಮ್ಮ ಪಕ್ಷವು ಆಳುವ ಮಿಜೋರಾಂನಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಹೇಳಿದರು.

ತೆಲಂಗಾಣ ಚುನಾವಣೆ : ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಬಿಎಸ್ವೈ ಹೆಸರು

40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ಬಿಗಿ ಭದ್ರತೆಯ ನಡುವೆ ಮತದಾನ ನಡೆಯುತ್ತಿದ್ದು, ಸಂಜೆ 4ರವರೆಗೆ ಮತದಾನ ನಡೆಯಲಿದೆ. ಐಜ್ವಾಲ್‍ನಲ್ಲಿ ಮತ ಚಲಾಯಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಝೋರಾಮ್‍ತಂಗ, ಹಣಕಾಸಿನ ಅಡಚಣೆಗಳ ಹೊರತಾಗಿಯೂ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಉತ್ತಮ ಅಭ್ಯರ್ಥಿಗಳನ್ನು ಹಾಕುವಲ್ಲಿ ಪ್ರತಿಸ್ರ್ಪಧಿ ಪಕ್ಷಗಳ ವೈಫಲ್ಯ ಸೇರಿದಂತೆ ಹಲವಾರು ಅಂಶಗಳಿಂದಾಗಿ ತಮ್ಮ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‍ಎಫ) ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿದರು.

ತಮ್ಮ ಪಕ್ಷವನ್ನು ಕೇಸರಿ ಪಕ್ಷದಿಂದ ದೂರವಿಡುವ ಪ್ರಯತ್ನದಲ್ಲಿ, ನಾವು ಕೇಂದ್ರದಲ್ಲಿ ಎನ್‍ಡಿಎ ಜೊತೆ ಪಾಲುದಾರರಾಗಿದ್ದೇವೆ ಮತ್ತು ನಮ್ಮ ಬೆಂಬಲವು ಪ್ರಾಥಮಿಕವಾಗಿ ಸಮಸ್ಯೆ ಆಧಾರಿತವಾಗಿದೆ. ರಾಜ್ಯದಲ್ಲಿ ನಾವು ಬಿಜೆಪಿಯೊಂದಿಗೆ ಯಾವುದೇ ಸಂಬಂಧ ಅಥವಾ ಮೈತ್ರಿ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾವು ಅಧಿಕಾರವನ್ನು ಉಳಿಸಿಕೊಂಡರೆ, ಅಗತ್ಯವಿದ್ದಲ್ಲಿ ಪೂರ್ವನಿರ್ಮಿತ ಮನೆಗಳನ್ನು ನಿರ್ಮಿಸುವ ಮೂಲಕ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ನಿರಾಶ್ರೀತರಿಗೆ ಮತ್ತು ಮಣಿಪುರದಿಂದ ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಪುನರ್ವಸತಿ ಕಲ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಝೋರಂತಂಗ ಹೇಳಿದರು.

RELATED ARTICLES

Latest News