Saturday, July 27, 2024
Homeರಾಷ್ಟ್ರೀಯಅಮೇಥಿಯಲ್ಲಿ 26 ವರ್ಷಗಳ ನಂತರ ಗಾಂಧಿಯೇತರ ಕುಟುಂಬದವರ ಸ್ಪರ್ಧೆ

ಅಮೇಥಿಯಲ್ಲಿ 26 ವರ್ಷಗಳ ನಂತರ ಗಾಂಧಿಯೇತರ ಕುಟುಂಬದವರ ಸ್ಪರ್ಧೆ

ಅಮೇಥಿ,ಮೇ3- ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ 26 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬ ಹೊರತುಪಡಿಸಿದ ಅಭ್ಯರ್ಥಿಯೊಬ್ಬರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪಧಿರ್ಸುತ್ತಿದ್ದಾರೆ.

ಗಾಂಧಿ ಕುಟುಂಬದ ಹಿಡಿತದಲ್ಲಿದ್ದ ಉತ್ತರಪ್ರದೇಶದ ಅಮೇಥಿ ಕ್ಷೇತ್ರವೂ 2019ರಲ್ಲಿ ಬಿಜೆಪಿ ಪಾಲಾಗಿತ್ತು ಅಂತಹ ಕ್ಷೇತ್ರವನ್ನು ಮರು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

ಈ ಬಾರಿ ರಾಹುಲ್‌ಗಾಂಧಿ ಅವರೇ ಸ್ಪಧಿರ್ಸುವ ಮೂಲಕ ಕ್ಷೇತ್ರವನ್ನು ಮರುವಶ ಮಾಡಿಕೊಳ್ಳಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಕೈ ಮುಖಂಡರು ಗಾಂಧಿ ಕುಟುಂಬ ಆಪ್ತರಾಗಿರುವ ಕಿಶೋರಿ ಲಾಲ್‌ ಶರ್ಮಾ ಅವರಿಗೆ ಟಿಕೆಟ್‌ ನೀಡಿದೆ.ಮೂರು ದಶಕಗಳಲ್ಲಿ ಕನಿಷ್ಠ ನಾಲ್ವರು ಗಾಂಧಿ ಕುಟುಂಬದ ಸದಸ್ಯರು ವಿವಿಧ ಸಮಯಗಳಲ್ಲಿ ಸ್ಪಧಿರ್ಸಿದ ಈ ಕ್ಷೇತ್ರದ ಎರಡನೇ ಗಾಂಧಿಯೇತರ ಕಾಂಗ್ರೆಸ್‌ ಅಭ್ಯರ್ಥಿ ಎಂಬ ಖ್ಯಾತಿಗೆ ಶರ್ಮಾ ಒಳಗಾಗಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಹತ್ಯೆಯ ನಂತರ ತೆರವಾದ ನಂತರ ಗಾಂಧಿಯೇತರ ಕುಟುಂಬದ ಸತೀಶ್‌ ಶರ್ಮಾ ಅವರು ಎರಡು ಬಾರಿ ಗೆದ್ದಿದ್ದು, 1998ರ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದರು.

ಸಂಜಯ್‌ ಗಾಂಧಿ 1990 ರಲ್ಲಿ ಈ ಸ್ಥಾನವನ್ನು ಗೆದ್ದರು, ಆದರೆ ಆ ವರ್ಷ ವಿಮಾನ ಅಪಘಾತದಲ್ಲಿ ಅವರ ಮರಣದ ನಂತರ 1981 ರಲ್ಲಿ ಉಪಚುನಾವಣೆಗಳಿಗೆ ಕಾರಣವಾಯಿತು. ರಾಜೀವ್‌ ಗಾಂಧಿ ಅವರು ಸ್ಥಾನವನ್ನು ಪಡೆದರು ಮತ್ತು 1991 ರಲ್ಲಿ ಅವರ ಹತ್ಯೆಯಾಗುವವರೆಗೂ ನಾಲ್ಕು ಬಾರಿ ಗೆದ್ದಿದ್ದರು.

ಆ ನಂತರ 2004, 2009 ಹಾಗೂ 2014ರಲ್ಲಿ ಈ ಕ್ಷೇತ್ರದಿಂದ ರಾಹುಲ್‌ ಸತತವಾಗಿ ಗೆಲುವು ಸಾಧಿಸಿದ್ದರೂ ಆದರೆ, ಕಳೆದ 2019ರಲ್ಲಿ ಅವರು ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಇದೀಗ ಅಮೇಥಿಗೆ ಮತ್ತೆ ಚುನಾವಣೆ ನಡೆಯುತ್ತಿದ್ದು ಎರಡನೇ ಬಾರಿಗೆ ಗಾಂಧಿಯೇತರ ಕುಟುಂಬದ ವ್ಯಕ್ತಿಯಾಗಿರುವ ಶರ್ಮಾ ಅವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

RELATED ARTICLES

Latest News