ರಾಹುಲ್ ಗಾಂಧಿ ಸ್ಪರ್ಧಿಸುವ ಕ್ಷೇತ್ರದ ಚರ್ಚೆ ಹುಟ್ಟು ಹಾಕಿದ ಭಾರತ್ ಜೋಡೋ ಯಾತ್ರೆ

ಬಘ್‍ಪತ್,ಜ.4- ಹೊಸ ವರ್ಷ ರಜಾದಿನಗಳ ಬಿಡುವಿನ ಬಳಿಕ ಪುನರ್ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಅಮೇಥಿ ಕ್ಷೇತ್ರದ ಒಂದುವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬಿಳಿ ಟಿ-ಶರ್ಟ್ ಧರಿಸಿ ಪಾಲ್ಗೋಳ್ಳುವ ಮೂಲಕ ಗಮನ ಸೆಳೆದರು. ಇಂದು ಬೆಳಗ್ಗೆ ಬಘಪತ್‍ನ ಮವಿಕಲನ್ ಗ್ರಾಮದಿಂದ ಯಾತ್ರೆ ಪುನರ್ ಆರಂಭವಾಯಿತು. ಉತ್ತರ ಪ್ರದೇಶದಲ್ಲಿ ಎರಡು ದಿನಗಳ ಕಾಲ ಸಂಚರಿಸಿ ನಂತರ ಹರ್ಯಾಣದ ಪಾಣಿಪತ್ ಅನ್ನು ಗುರುವಾರ ಸಂಜೆ ಪ್ರವೇಶಿಸಲಿದೆ.ರಾಹುಲ್‍ಗಾಂಧಿ ಮುರು ಬಾರಿ ಸಂಸದರಾಗಿದ್ದ ಅಮೇಥಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಇಂದು ಯಾತ್ರೆಯಲ್ಲಿ ಭಾಗವಹಿಸಿದ್ದರು. […]