ಅಶೋಕ್ ನಗರ, ನ.7- ಕಾಂಗ್ರೆಸ್ ಪಕ್ಷದ ಜಾತಿ ಗಣತಿ ಕಾರ್ಯಕ್ಕೆ ಜನ ಮರುಳಾಗಬಾರದು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮನವಿ ಮಾಡಿಕೊಂಡಿದ್ದಾರೆ. ಇದೇ ನ.17 ರಂದು ನಡೆಯಲಿರುವ ಮಧ್ಯಪ್ರದೇಶದ ಚುನಾವಣೆ ಅಂಗವಾಗಿ ಅಶೋಕ್ ನಗರದಲ್ಲಿ ಆಯೋಜಿಸಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಗಣತಿಗಾಗಿ ಕಾಂಗ್ರೆಸ್‍ನ ಬೇಡಿಕೆಗೆ ಸಿಲುಕಿಕೊಳ್ಳಬೇಡಿ ಎಂದು ಜನರನ್ನು ಕೇಳಿಕೊಂಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡುವುದನ್ನು ಕಾಂಗ್ರೆಸ್ ವಿಳಂಬ ಮಾಡಿರುವ ಕಾಂಗ್ರೆಸಿಗರು ಮಾಡುತ್ತಿರುವ ಜಾತಿಯಾಧಾರಿತ ಜನಗಣತಿ ಮೋಡಿಗೆ ಮಾರುಹೋಗಬೇಡಿ ಎಂದು ಅವರು ಮನವಿ ಮಾಡಿಕೊಂಡರು.
BREAKING : ಅಮೆರಿಕದ ಒತ್ತಡಕ್ಕೆ ಮಣಿದ ಇಸ್ರೇಲ್, ಯುದ್ಧದ ಅಲ್ಪ ವಿರಾಮಕ್ಕೆ ಒಪ್ಪಿಗೆ
ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಆಳ್ವಿಕೆಯಲ್ಲಿ, ಕಾಕಾ ಕಾಲೇಲ್ಕರ್ ಆಯೋಗ ಮತ್ತು ಮಂಡಲ್ ಆಯೋಗವು ಒಬಿಸಿಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿತು. ಆದರೆ ಕಾಂಗ್ರೆಸ್ ಕಾರ್ಯನಿರ್ವಹಿಸಲಿಲ್ಲ ಆದರೆ ಈಗ ಗೆಲುವಿಗಾಗಿ ಕಾಂಗ್ರೆಸ್ ಜಾತಿ ಗಣತಿ ಬಯಸುತ್ತಿದೆ ಎಂದಿದ್ದಾರೆ. ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಬಿಜೆಪಿ ಶೋಷಣೆ ಮಾಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಬಿಎಸ್‍ಪಿ ಮಧ್ಯಪ್ರದೇಶ ಚುನಾವಣೆಯಲ್ಲಿ ಗೊಂಡ್ವಾನಾ ಗಂತಂತ್ರ ಪಾರ್ಟಿ (ಜಿಜಿಪಿ) ಜೊತೆ ಮೈತ್ರಿ ಮಾಡಿಕೊಂಡು ತನ್ನ ಎಲ್ಲಾ ಶಕ್ತಿಯೊಂದಿಗೆ ಹೋರಾಡುತ್ತಿದೆ ಎಂದು ಅವರು ಹೇಳಿದರು.