Thursday, March 6, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಚಿಕ್ಕಬಳ್ಳಾಪುರ : ತಾಯಿಯ ಮೃತದೇಹದ ಎದುರೇ ಹಣಕ್ಕಾಗಿ ಮಕ್ಕಳು ಕಿತ್ತಾಟ

ಚಿಕ್ಕಬಳ್ಳಾಪುರ : ತಾಯಿಯ ಮೃತದೇಹದ ಎದುರೇ ಹಣಕ್ಕಾಗಿ ಮಕ್ಕಳು ಕಿತ್ತಾಟ

Chikkaballapur: Children quarrel over money in front of their mother's dead body

ಚಿಕ್ಕಬಳ್ಳಾಪುರ, ಮಾ.6-ಹಣಕ್ಕಾಗಿ ಮಕ್ಕಳು ಕಿತ್ತಾಡಿ ಮೃತ ತಾಯಿಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದಿದ ಅಮಾನವೀಯ ಘಟನೆಯೊಂದು ಘಟನೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕುರುಗೂಡು ಗ್ರಾಮದಲ್ಲಿ ನಡೆದಿದೆ.

ವಯೋಸಹಜ ಖಾಯಿಲೆಯಿಂದ ಅನಂತಕ್ಕ ಎಂಬ ಮಹಿಳೆ ಮೃತಪಟ್ಟಿದ್ದರು. ಅವರಿಗೆ ಆರು ಜನ ಮಕ್ಕಳಿದ್ದರೂ ಕೂಡ ಹಣಕ್ಕಾಗಿ ಕಚ್ಚಾಡಿಕೊಂಡು ಶವವನ್ನು ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಇರಿಸಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೂಡು ಗ್ರಾಮದ ಅನಂತಕ್ಕ ಎಂಬ ಮಹಿಳೆ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅನಂತಕ್ಕ ಅವರ ಜಮೀನನ್ನು ವಶಕ್ಕೆ ಪಡೆದು ಕೆಐಡಿಬಿ 93 ಲಕ್ಷ ರೂಪಾಯಿ ಬಂದಿತ್ತು ಈ ಹಣಕ್ಕಾಗಿಯೇ ಮಕ್ಕಳು ಮೊದಲೇ ಕಿತ್ತಾಡಿಕೊಂಡಿದ್ದಾರೆ.

ನಂತರ ಈ ಹಣವನ್ನು ಗಂಡು ಮಕ್ಕಳು ಮಾತ್ರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ರು, ಇದರಿಂದ ಕೋಪಗೊಂಡು ಹೆಣ್ಣು ಮಕ್ಕಳು ನ್ಯಾಯಾಲಯಕ್ಕೆ ಹೋಗಿದ್ದರು ಅಲ್ಲಿ ಹೆಣ್ಣು ಮಕ್ಕಳಿಗೆ 40 ಲಕ್ಷ ಹಣ ನೀಡುವಂತೆ ತೀರ್ಪು ನೀಡಿತ್ತು. ಆದರೆ ಹಣ ನೀಡದೆ ಸತ್ತಾಯಿಸಲಾಗುತ್ತಿತ್ತು.

ತಾಯಿ ಮೃತಪಟ್ಟ ನಂತರ ಹಣವನ್ನು ಕೇಳ ಬೇಡ ಆಗ ಮಾತ್ರ ಶವವನ್ನು ಕೊಡುವುದಾಗಿ ಗಂಡು ಮಕ್ಕಳು ಹೇಳಿದ್ದಾರೆ. ಇದರಿಂದ ಜಗಳ ನಡೆದು ಕಳೆದ ರಾತ್ರಿ ಪೂರ್ತಿ ಪೊಲೀಸ್ ಠಾಣೆ ಮುಂಭಾಗ ಶವ ಇಟ್ಟು ದೂರು ದಾಖಲಿಸುವಂತೆ ಹೆಣ್ಣುಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಅಮಾನವೀಯವಾಗಿ ವರ್ತನೆ ತೋರಿದ್ದಾರೆ. ಇದಾದ ಬಳಿಕ ಇಂದು ತಹಶೀಲ್ದಾರ್ ಸ್ಥಳಕ್ಕೆ ಬಂದು ಸಮಸ್ಯೆ ಮುಕ್ತಿ ಕಲ್ಪಿಸುವ ಭರವಸೆ ನೀಡಿದ್ದಾರೆ.

RELATED ARTICLES

Latest News