ನಿತ್ಯ ನೀತಿ : ಬದುಕು ಬಗೆಹರಿಸಬೇಕಾದ ಸಮಸ್ಯೆಯಲ್ಲ, ಅನುಭವಿಸಬೇಕಾದ ವಾಸ್ತವ.
ಪಂಚಾಂಗ : 07-03-2025, ಶುಕ್ರವಾರ
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಸೌರ ವಸಂತ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಮೃಗಶಿರಾ / ಯೋಗ: ಪ್ರೀತಿ / ಕರಣ: ಬಾಲವ
ಸೂರ್ಯೋದಯ – ಬೆ.06.32
ಸೂರ್ಯಾಸ್ತ – 06.29
ರಾಹುಕಾಲ -10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಬರವಣಿಗೆ ಮತ್ತು ಮುದ್ರಣ ಕೆಲಸ ಮಾಡುವವರಿಗೆ ವರಮಾನ ಸಿಗಲಿದೆ.
ವೃಷಭ: ವಸಾ್ತ್ರಭರಣ ಖರೀದಿಸುವ ಸಾಧ್ಯತೆ ಇದೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.
ಮಿಥುನ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.
ಕಟಕ: ವ್ಯವಹಾರದಲ್ಲಿ ಶತ್ರುಗಳಿಂದ ತೊಂದರೆ ಯಾಗಲಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯ.
ಸಿಂಹ: ಕಾರ್ಯ ಸಾಮರ್ಥ್ಯ ಅರ್ಥಮಾಡಿಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಕನ್ಯಾ: ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡು ವವರು ಎಚ್ಚರಿಕೆಯಿಂದಿರಿ.
ತುಲಾ: ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಎಚ್ಚರಿಕೆಯಿಂದಿರಿ.
ವೃಶ್ಚಿಕ: ವ್ಯಾಪಾರದಲ್ಲಿ ಶತ್ರುಗಳ ಕಾಟ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ.
ಧನುಸ್ಸು: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ. ಮಾತಿಗಿಂತ ವೌನವಾಗಿರಿ.
ಮಕರ: ವಿವಾಹಿತ ದಂಪತಿ ಸ್ಮರಣೀಯ ಕ್ಷಣಗಳನ್ನು ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು.
ಕುಂಭ: ಯೋಗ-ಧ್ಯಾನ ಮಾಡುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ.
ಮೀನ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.