ಥಾಣೆ, ಮಾ.8- ಅಕ್ರಮವಾಗಿ ದೇಶದಲ್ಲಿ ನೆಲೆಸಿದ್ದ ಆರೋಪದ ಮೇಲೆ ಇಬ್ಬರು ಬಾಂಗ್ಲಾದೇಶಿ ಮಹಿಳೆಯರನ್ನು ಪೊಲೀಸರು ಇಲ್ಲಿ ಬಂಧಿಸಿದ್ದಾರೆ.ಇವರಿಗೆ ಫ್ಲಾಟ್ ಬಾಡಿಗೆಗೆ ನೀಡಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಬರ್ನಾಥ್ನ ಅಡವ್ಲಿ-ಧೋಕ್ಲಿ ಪ್ರದೇಶದ ವಸತಿ ಸಂಕೀರ್ಣದ ಮೇಲೆ ದಾಳಿ ನಡೆಸಿದಾಗ ಈ ಮಹಿಳೆಯರು ಸಿಕ್ಕಿಬಿದ್ದಿದ್ದಾರೆ.ಬಂಧಿತರನ್ನು ಫರ್ಜಾನಾ ಶಿರಾಗುಲ್ ಶೇಖ್ (36) ಮತ್ತು ಬಿಥಿ ಅಲಿಯಾಸ್ ಪ್ರಿಯಾ ನೂರಿಸ್ಲಾಮ್ ಅಖ್ತರ್ (24) ಎಂದು ತಿಳಿಸಿದೆ.
ಮಹಿಳೆಯರಿಗೆ ಫ್ಲಾಟ್ ಅನ್ನು ಬಾಡಿಗೆಗೆ ನೀಡಿದ್ದ ತಾಹಿರ್ ಮುನೀರ್ ಅಹ್ಮದ್ ಖಾನ್ (35) ಮತ್ತು ಗಣೇಶ್ ಚಂದ್ರ ದಾಸ್ (37) ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಾಸ್ಪೋರ್ಟ್ ಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇವರು ಯಾವಾಗ ಬಂದರು ಮತ್ತು ನೆರವಾದವರ ಬಗ್ಗೆ ತನಿಖೆ ನಡೆಯುತ್ತಿದೆ.