ಬೆಂಗಳೂರು, ಜ.30- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ಶುರುವಾಗಿದೆ.ರಾಮಲಿಂಗಾ ರೆಡ್ಡಿ ಅವರು ಉತ್ತಮ ಸಾರಿಗೆ ವ್ಯವಸ್ಥೆ ರೂಪಿಸುವಲ್ಲಿ ವಿಫಲರಾಗಿರುವುದರಿಂದ ಖಾಸಗಿ ಬಸ್ ಸೇವೆಗೆ ಅನುಮತಿ ನೀಡುವುದು ಸೂಕ್ತ ಎಂದು ಪೈ ಎಕ್ಸ್ ಮಾಡಿದ್ದಾರೆ.
ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲೇ ಟಾಂಗ್ ನೀಡಿರುವ ರೆಡ್ಡಿ ಅವರು ಈ ಕುರಿತಂತೆ ನಿಮ ಜೊತೆ ಚರ್ಚೆ ಮಾಡಲು ನಮ ಬಿಎಂಟಿಸಿ ಎಂಡಿ ಸಾಕು ಎಂದು ಕಾಲೇಳೆದಿದ್ದಾರೆ.
ಸಾರಿಗೆ ವ್ಯವಸ್ಥೆ ಕುರಿತಂತೆ ನಿಮೊಂದಿಗೆ ಯಾವುದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆಗೆ ಸಿದ್ದರಿದ್ದೇವೆ. ನಿಮ್ಮ ಜೊತೆಗೆ ಚರ್ಚೆ ಮಾಡಲು ನಮ್ಮ ಬಿಎಂಟಿಸಿ ಎಂಡಿ ಸಾಕು. ದಯಮಾಡಿ ಬಂದು ವಾಸ್ತವಾಂಶಗಳನ್ನು ನೇರವಾಗಿ ಅವರೊಂದಿಗೆ ಚರ್ಚಿಸಿ ಎಂದು ರೆಡ್ಡಿ ಸವಾಲ್ ಹಾಕಿದ್ದಅರೆ.
ನೀವು ಚರ್ಚೆಗೆ ಬರುತ್ತೀರಾ, ಇಲ್ಲ ಎಕ್ಸ್ ಮಾಡುತ್ತಲೇ ಇರುತ್ತೀರಾ. ನಿಮ್ಮ ದೃಷ್ಟಿಕೋನವು ಕೇವಲ ಪಕ್ಷಪಾತವಲ್ಲ – ಇದು ಮೂಲಭೂತ ಸಿದ್ಧಾಂತವಾಗಿದೆ. ನೀವು ಸಾರ್ವಜನಿಕ ಸೇವೆಯನ್ನು ಬ್ಯಾಲೆನ್್ಸ ಶೀಟ್ ಆಧಾರದಲ್ಲಿ ನೋಡ್ತೀರಿ. ನಾವು ಸಾರ್ವಜನಿಕ ಸಾರಿಗೆ ಸೇವೆಯಾಗಿ ನೋಡುತ್ತೇವೆ ಎಂದಿದ್ದಾರೆ.
ಶಕ್ತಿ ಯೋಜನೆ ಮೂಲಕ ಕ್ರಾಂತಿ ಮಾಡಿದ್ದೇವೆ. ನಾವು ಮಹಿಳೆಯರಿಗೆ 650+ ಕೋಟಿ ಉಚಿತ ಸೇವೆ ನೀಡಿದ್ದೇವೆ. ಶಕ್ತಿ ಯೋಜನೆ ಕೇವಲ ಯೋಜನೆ ಅಲ್ಲ. ಇದು ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆರ್ಥಿಕ ಸಬಲೀಕರಣ. ನೀವು ನೇರ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.
