ಡೆನ್ವರ್ ಮಾ.14-ಹಾರಾಟದ ವೇಳೆ ಸಮಸ್ಯೆ ಉಂಟಾಗಿ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಅಮೇರಿಕನ್ ಏರ್‌ಲೈನ್ಸ್ ವಿಮಾನವು ಬೆಂಕಿಗೆ ಆಹುತಿಯಾಗಿದ್ದು, ಅಚ್ಚರಿಯಲ್ಲಿ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಹೊರಗೆ ಹಾರಿದ್ದಾರೆ.
ಕೊಲೊರಾಡೋ ಸ್ಟಿಂಗ್ಸ್ ವಿಮಾನ ನಿಲ್ದಾಣದಿಂದ ಡಲ್ಲಾಸ್ ಫೋರ್ಟ್ ವರ್ತ್ಗೆ ತೆರಳುತ್ತಿದ್ದ ಅಮೇರಿಕನ್ ರ್ಏಲೈನ್ಸ್ ಬೋಯಿಂಗ್ 737-800 ವಿಮಾನದ ಎಂಜಿನ್ ಸಮಸ್ಯೆ ಗಮನಿಸಿ ಪೈಲಟ್ ತುರ್ತು ವರದಿ ಮಾಡಿದ ನಂತರ ಹತ್ತಿರದ ಡೆನ್ವರ್‌ಗೆ ತಿರುಗಿಸಲಾಯಿತು ಮತ್ತು ಸುರಕ್ಷಿತವಾಗಿ ಇಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿವಾಹಿನಿಗಳು ಪೋಸ್ಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳು ವಿಮಾನವನ್ನು ಸುತ್ತುವರೆದಿರುವ ಹೊಗೆ ಮತ್ತು ವಿಮಾನದ ರೆಕ್ಕೆಯ ಮೇಲೆ ಕೆಲವು ಪ್ರಯಾಣಿಕರು ರಕ್ಷಣಾ ಸಿಬ್ಬಂದಿ ನಿಂತಿರುವುದನ್ನು ತೋರಿಸಿದೆ. ಪ್ರಯಾಣಿಕರು ಸೈಡ್‌ಗಳನ್ನು ಬಳಸಿ ಇಳಿಸಲಾಗಿದೆ ಎಂದು ಹೇಳಿದೆ.
ವಿಮಾನವು ಎಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನವು ಯಾವಾಗ ಬೆಂಕಿಗೆ ಆಹುತಿಯಾಯಿತು ಎಂಬುದರ ಕುರಿತು ತಕ್ಷಣದ ಸ್ಪಷ್ಟಿಕರಣವಿಲ್ಲ ಮತ್ತು ಯಾವುದೇ ಗಾಯಗಳು ವರದಿಯಾಗಿಲ್ಲ.
172 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಟರ್ಮಿನಲ್‌ಗೆ ಕರೆದೊಯ್ಯಲಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಸಿಬ್ಬಂದಿ ಸದಸ್ಯರು, ತಂಡ ಮತ್ತು ಪ್ರಥಮ ಪ್ರತಿಕ್ರಿಯೆ ನೀಡಿದವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು.
ಅಗ್ನಿಶಾಮಕ ದಳದವರು ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಸಂಪೂರ್ಣ ನಂದಿಸಿದರು.ಘಾನೆ ಸಂಬಂದ ತನಿಖೆ ಆರಂಭಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದರು.