ಡೀರ್ ಅಲ್-ಬಲಾಹ್ (ಗಾಜಾ ಪಟ್ಟಿ), ಮಾ.18– ಮುಂಜಾನೆ ಗಾಜಾ ಪಟ್ಟಿಯಾದ್ಯಂತ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.ಕದನ ವಿರಾಮ ನಂತರ ನಡೆದಿರುವ ಈ ಹಠಾತ್ ದಾಳಿಯಲ್ಲಿ ಹಮಾಸ್ ಉಗ್ರರನ್ನು ಹೊಡೆದುರುಳಸಲಾಗಿದೆ ಎಂದು ಹೇಳಿಕೊಂಡಿದೆ ಇದನ್ನು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ದೃಢಪಡಿಸಿದ್ದು ಸುಮಾರು 200 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದಾರೆ.
ಇಸೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕದನ ವಿರಾಮವನ್ನು ವಿಸ್ತರಿಸುವ ಮಾತುಕತೆಯಲ್ಲಿ ಪ್ರಗತಿಯ ಕೊರತೆಯಾಗಿದೆ ಎಂದಿದ್ದಾರೆ ಕಾರ್ಯಾಚರಣೆಯು ಮುಕ್ತವಾಗಿದೆ ಮತ್ತು ವಿಸ್ತರಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಇಸ್ರೇಲ್, ಇಂದಿನಿಂದ, ಹೆಚ್ಚುತ್ತಿರುವ ಮಿಲಿಟರಿ ಬಲದೊಂದಿಗೆ ಹಮಾಸ್ ವಿರುದ್ದ ಕಾರ್ಯನಿರ್ವಹಿಸುತ್ತದೆ ಎಂದು ನೆತನ್ಯಾಹು ಅವರ ಕಚೇರಿ ಹೇಳಿದೆ.
ಹಠಾತ್ ದಾಳಿಯು ಮುಸ್ಲಿಂರ ರಂಜಾನ್ ಶಾಂತತೆಯ ಅವಧಿಯನ್ನು ಛಿದ್ರಗೊಳಿಸಿತು. ವಿನಾಶ ಉಂಟುಮಾಡಿದ 17 ತಿಂಗಳ ಯುದ್ಧ ಮರಳುವ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದು ಮಾತುಗಳು ಕೇಳಿಬಂದಿದೆ. ಇನ್ನು ಇಸ್ರೇಲಿ ಒತ್ತೆಯಾಳುಗಳ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈಜಿಪ್ಟ್ ಮತ್ತು ಕತಾರ್ ಜೊತೆಗೆ ಮಧ್ಯಸ್ಥಿಕೆ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್, ಒತ್ತೆಯಾಳುಗಳನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು ಅಥವಾ ತೀವ್ರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಾರ್ಯಾಚರಣೆ ಬಗ್ಗೆ ಅನಾಮಧೇಯತೆಯ ಸ್ಥಿತಿಯಲ್ಲಿ ಮಾತನಾಡುವ ಇಸ್ರೇಲಿ ಅಧಿಕಾರಿಯೊಬ್ಬರು, ಹಮಾಸ್‌ನ ಮಿಲಿಟರಿ, ನಾಯಕರು ಮತ್ತು ಮೂಲಸೌಕರ್ಯವನ್ನು ಹೊಡೆದುರುಳಿಸಲು ವಾಯು ದಾಳಿಯನ್ನು ಮೀರಿ ಕಾರ್ಯಾಚರಣೆಯನ್ನು ವಿಸ್ತರಿಸಲು ಇಸ್ರೇಲ್ ಯೋಜಿಸುತ್ತಿದೆ ಎಂದು ಹೇಳಿದರು. ಹಮಾಸ್ ಪುನರ್ನಿಮರ್ಾಣ ಮಾಡಲು ಮತ್ತು ಹೊಸ ದಾಳಿಗಳನ್ನು ಯೋಜಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿ ಆರೋಪಿಸಿದರು.
ಕದನ ವಿರಾಮ ಜಾರಿಯಾದ ನಂತರ ಇತ್ತೀಚಿನ ವಾರಗಳಲ್ಲಿ ಹಮಾಸ್ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳು ತ್ವರಿತವಾಗಿ ಬೀದಿಗೆ ಮರಳಿದವು. ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಗಾಜಾದಲ್ಲಿ ನರಕದ ಬಾಗಿಲು ತೆರೆಯುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ ಹೇಳಿದ್ದಾರೆ. ನಮ್ಮ ಎಲ್ಲಾ ಒತ್ತೆಯಾಳುಗಳು ಮನೆಗೆ ಬರುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಮತ್ತು ನಾವು ಎಲ್ಲಾ ಯುದ್ಧದ ಗುರಿಗಳನ್ನು ಸಾಧಿಸುತ್ತೇವೆ ಎಂದು ಅವರು ಹೇಳಿದರು. ಗಾಜಾದಾದ್ಯಂತ ಸ್ಫೋಟಗಳು ಕೇಳಿಬರುತ್ತಿವೆ.
ವಿವಿಧ ಪ್ರದೇಶಗಳನ್ನು ಏಕಕಾಲದಲ್ಲಿ ಗುರಿಯಾಗಿಸಲಾಗುತ್ತಿರುವುದರಿಂದ ಅದರ ಪ್ರತಿದಾಳಿ, ರಕ್ಷಣಾ ಪ್ರಯತ್ನಗಳನ್ನು ಕೈಗೊಳ್ಳಲು ಕಷ್ಟಕರ ಸಮಯವನ್ನು ಎದುರಿಸುತ್ತಿದ್ದಾರೆ ಎಂದು ಪ್ಯಾಲಸ್ತೇನ್ ಪ್ರದೇಶದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ.
ಮೊದಲ ಹಂತದಲ್ಲಿ ಸುಮಾರು 2,000 ಪ್ಯಾಲೇಸ್ಟಿನಿಯನ್ ಕೈದಿಗಳಿಗೆ ಬದಲಾಗಿ ಹಮಾಸ್ 40 ಕ್ಕೂ ಹೆಚ್ಚು ಇಸ್ರೇಲಿ ಇತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಆದರೆ ಆ ಕದನ ವಿರಾಮವು ಎರಡು ವಾರಗಳ ಹಿಂದೆ ಕೊನೆಗೊಂಡಾಗಿನಿಂದ, ಸುಮಾರು 60 ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮತ್ತು ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಎರಡನೇ ಹಂತದೊಂದಿಗೆ ಮುಂದುವರಿಯುವ ಮಾರ್ಗವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.
ನೆತನ್ಯಾಹು ಪದೇ ಪದೇ ಯುದ್ಧವನ್ನು ಪುನರಾರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಈ ತಿಂಗಳ ಆರಂಭದಲ್ಲಿ ಹಮಾಸ್ ಮೇಲೆ ಒತ್ತಡ ಹೇರಲು ಮುತ್ತಿಗೆ ಹಾಕಿದ ಪ್ರದೇಶಕ್ಕೆ ಎಲ್ಲಾ ಆಹಾರ ಮತ್ತು ಸಹಾಯ ವಿತರಣೆಗಳ ಪ್ರವೇಶವನ್ನು ಕಡಿತಗೊಳಿಸಿದರು.
ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಪದೇ ಪದೇ ನಿರಾಕರಿಸಿದ ನಂತರ ಮತ್ತು ಯುಎಸ್ ಅಧ್ಯಕ್ಷೀಯ ರಾಯಭಾರಿ ಸ್ಟೀವ್ ವಿಟ್ಯಾಫ್ ಮತ್ತು ಮಧ್ಯವರ್ತಿಗಳಿಂದ ಪಡೆದ ಎಲ್ಲಾ ಕೊಡುಗೆಗಳನ್ನು ತಿರಸ್ಕರಿಸಿದ ನಂತರ ಇದು ಸಂಭವಿಸುತ್ತದೆ ಎಂದು ನೆತನ್ಯಾಹು ಅವರ ಕಚೇರಿ ಮುಂಜಾನೆ ತಿಳಿಸಿದೆ. ಹಮಾಸ್ ಅಧಿಕಾರಿ ತಾಹರ್ ನುನು ಇಸ್ರೇಲ್ ದಾಳಿಯನ್ನು ಟೀಕಿಸಿದ್ದಾರೆ.