ಮುಂಬೈ, ಮಾ.28- ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಾಂಗ್ಲಾದೇಶಿ ಪ್ರಜೆಯೊಬ್ಬನನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಮತ್ತು ಮಾರ್ಚ್ 17 ರ ನಾಗ್ಪುರ ಹಿಂಸಾಚಾರದಲ್ಲಿ ಅವನು ಭಾಗಿಯಾಗಿದ್ದಾನೆಯೇ ಎಂದು ಪರಿಶೀಲಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಅಪರಾಧ ವಿಭಾಗದ ಘಟಕವು ಅಜೀಜುಲ್ ನಿಜಾನುಲ್ ರೆಹಮಾನ್ (29) ಎಂಬಾತನನ್ನು ದಾದರ್‌ನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹಿಂಸಾಚಾರದ ಸಮಯದಲ್ಲಿ ಅತ ನಾಗ್ಪುರದಲ್ಲಿದ್ದ ಎಂದು ಶಂಕೆಯಿದ್ದು ಆತ ನಾಗ್ಪುರದ ಹಸನ್‌ಬಾಗ್‌ನಲ್ಲಿ ನೆಲೆಸಿದ್ದ ಕೆಲವು ದಿನಗಳ ಹಿಂದೆ ದಾದರ್‌ಗೆ ಬಂದಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ದಿನಗೂಲಿ ಕಾರ್ಮಿಕನಾಗಿ ರೆಹಮಾನ್, ನಕಲಿ ದಾಖಲೆಗಳನ್ನು ಬಳಸಿ ಆಧಾರ್ ಕಾರ್ಡ್ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆಎಂದು ಪಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಮೊಘಲ್ ರಾಜ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ವಿಎಚ್‌ಪಿ ಮತ್ತು ಬಜರಂಗದಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವದಂತಿಗಳ ನಡುವೆ ಮಾ.17 ರಂದು ಮಧ್ಯ ನಾಗ್ಪುರ ಪ್ರದೇಶಗಳಲ್ಲಿ ಉದ್ರಿಕ್ತ ಗುಂಪುಗಳು ಗಲಭೆ ನಡೆಸಿತ್ತು. ಪ್ರಮುಖ ಆರೋಪಿ ಫಾಹೀಮ್ ಖಾನ್ ಸೇರಿದಂತೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 110 ಕ್ಕೂ ಹೆಚ್ಚು ಜನರನ್ನು ಈಗಾಗಲೆ ಬಂಧಿಸಲಾಗಿದೆ.