ರಾಂಚಿ,ನ.9- ಜಾರ್ಖಂಡ್ ಪೊಲೀಸ್‍ನ ಭಯೋತ್ಪಾದನಾ ನಿಗ್ರಹ ದಳ (ATS) ರಾಜ್ಯದ ಗೊಡ್ಡಾ ಮತ್ತು ಹಜಾರಿಬಾಗ್ ಜಿಲ್ಲೆಗಳಲ್ಲಿ ಇಬ್ಬರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿರುವುದಾಗಿ ತಿಳಿಸಿದೆ. ಇಬ್ಬರ ವಿರುದ್ಧ ಯುಎಪಿಎ ಮತ್ತು ಐಪಿಸಿ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಉಗ್ರರಲ್ಲಿ ಒಬ್ಬರಾದ ಗೊಡ್ಡಾ ಜಿಲ್ಲೆಯ ಅಸಾನ್‍ಬಾನಿ ಪ್ರದೇಶದ ನಿವಾಸಿ ಎಂಡಿ ಆರಿಜ್ ಹುಸೇನೈನ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯುವಕರನ್ನು ಭೇಟಿಯಾಗುತ್ತಿದ್ದರು ಮತ್ತು ಅವರಿಗೆ ಬೋಧನೆ ಮಾಡುತ್ತಿದ್ದರು ಎಂದು ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ ಗಿಲ್, ಸಿರಾಜ್
ಮತ್ತೊಬ್ಬ ವ್ಯಕ್ತಿ ನಸೀಮ್‍ನನ್ನು ಹಜಾರಿಬಾಗ್‍ನ ಪೆಲಾವಲ್ ಪ್ರದೇಶದಲ್ಲಿ ಬಂಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿರುವ ಐಸಿಸ್ ಮತ್ತು ಇತರ ನಿಷೇತ ಭಯೋತ್ಪಾದಕ ಗುಂಪುಗಳೊಂದಿಗೆ ತನ್ನ ಸಂಪರ್ಕವನ್ನು ಹುಸೇನೈನ್ ತಪ್ಪೋಪ್ಪಿಕೊಂಡಿದ್ದಾನೆ.
ಜಿಹಾದ್ ಮತ್ತು ಐಸಿಸ್ ಸಿದ್ಧಾಂತಕ್ಕೆ ಸಂಬಂಸಿದ ಎರಡು ಪುಸ್ತಕಗಳನ್ನು ಹುಸೇನ್‍ಗೆ ನಸೀಮ್ ಕಳುಹಿಸಿದ್ದನು, ಎಟಿಎಸ್ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.