Saturday, April 19, 2025
Homeರಾಷ್ಟ್ರೀಯ | Nationalಗುಜರಾತ್‌ : ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಅಪ್ಪಳಿಸಿ ಮೂವರ ಸಾವು

ಗುಜರಾತ್‌ : ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಅಪ್ಪಳಿಸಿ ಮೂವರ ಸಾವು

3 Killed as Motorbike Crashes into Tractor-trolley in Gujarat

ಆನಂದ್, ಏ. 8: ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಆನಂದ್‌ ಜಿಲ್ಲೆಯಲ್ಲಿ ನಡೆದಿದೆ. ತಡರಾತ್ರಿ 10 ಗಂಟೆ ಸುಮಾರಿಗೆ ಜಿಲ್ಲೆಯ ಅಂಬಾಕುಯಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಅಂಕ್ಲಾವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೈಕ್ ಮುಂದೆ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯನ್ನು ಹಿಂಬಾಲಿಸುತ್ತಿತ್ತು. ಟ್ಯಾಕ್ಟರ್ ಚಾಲಕ ಹಾಕಿದ ಬ್ರೇಕ್ ನಿಂದಾಗಿ ಬೈಕ್ ಹಿಂದಿನಿಂದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೈಕ್ ಸವಾರರಾದ ಮನ್ದಾರ್ ಪರ್ಮಾ, ರಂಜಿತ್ ಪಧಿಯಾರ್ ಮತ್ತು ನರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಕ್ಲಾವ್ ಪೊಲೀಸರು ಟ್ರ್ಯಾಕ್ಟರ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News