ನವದೆಹಲಿ,ನ.10- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಧಂತೇರಸ್ ಹಬ್ಬದ ಶುಭಾಷಯ ಕೋರಿದ್ದಾರೆ. ದೇಶದಲ್ಲಿರುವ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ, ಆರೋಗ್ಯ ಮತ್ತು ಸಮೃದ್ಧಿಯ ಸಂಕೇತವಾದ ಧಂತೇರಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಧನ್ವಂತರಿಯ ಆಶೀರ್ವಾದದೊಂದಿಗೆ, ನೀವೆಲ್ಲರೂ ಆರೋಗ್ಯವಾಗಿ, ಸಮೃದ್ಧವಾಗಿ ಮತ್ತು ಸಂತೋಷದಿಂದ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವು ಹೊಸ ಶಕ್ತಿಯನ್ನು ಪಡೆಯುವುದನ್ನು ಮುಂದುವರೆಸಿದೆ ಎಂದು ಪ್ರಧಾನಿ ಮೋದಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಧಂತೇರೆಸ್ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ, ಇದನ್ನು ದೇಶದಾದ್ಯಂತ ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.
ಕಲಾ ಲೋಕದ ರಾಯಭಾರಿಗೆ 68ನೇ ಹುಟ್ಟುಹಬ್ಬ
ಸಿದ್ಧಿ ವಿನಾಯಕ ಗಣೇಶ, ಸಂಪತ್ತಿನ ದೇವತೆ ಮಹಾಲಕ್ಷ್ಮೀ ಮತ್ತು ಕುಬೇರ ಅವರನ್ನು ಪೂಜಿಸಲು ಸಮರ್ಪಿತವಾದ ಧಂತೇರಸಾ ದಿನದಂದು ಚಿನ್ನಾಭರಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಖರೀದಿಸಿದರೆ ಮಂಗಳಕರ ಎಂದು ಭಾವಿಸಲಾಗಿದೆ.
ಈ ದಿನದಂದು ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಪಾತ್ರೆಗಳು, ಅಡುಗೆ ಸಾಮಾನುಗಳು, ವಾಹನಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತಿತರ ವಸ್ತುಗಳ ಜೊತೆಗೆ ಪೊರಕೆಗಳ ಖರೀದಿಯನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ.