Saturday, April 19, 2025

ಮನೆ ಬಾಗಿಲಿಗೆ ಬಂದ ಒಂಟಿ ಸಲಗ

wild elephant at door steps

ಚಿಕ್ಕಮಗಳೂರು, ಏ.18 – ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ ಮೂಡಿ ಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪದ ಬಾರದ ಹಳ್ಳಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಒಂಟಿ ಸಲಗ ಬಂದಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಯಶವಂತ್ ರವರ ಮನೆ ಬಾಗಿಲಿಗೆ ಬಂದ ಒಂಟಿ ಸಲಗ ಕಂಡು ಕ್ಷಣ ಕಾಲ ಮನೆಯಲ್ಲಿದ್ದವರು ಆತಂಕಕ್ಕೆ ಒಳಗಾಗಿದ್ದಾರೆ. ಅಂಗಳದಲ್ಲಿ ಕಾಣಿಸಿದ ಆನೆ ಕ್ರಮೇಣ ಮನೆ ಬಾಗಿಲವರೆಗೂ ಬಂದು ಹಿಂತಿರುಗಿದೆ.

ಆನೆ ಬಂದ ದೃಶ್ಯವನ್ನು ಹೆದರುತ್ತಲೇ ಮನೆ ಮಾಲೀಕ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.
ಆನೆಗಳ ಆವಾಸ ಸ್ಥಾನದಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಳ್ಳುತ್ತಿರುವುದರ ಜೊತೆಗೆ ಆನೆಗೆ ಅಗತ್ಯ ಇರುವ ಆಹಾರ ಸರಪಳಿಯಲ್ಲಿಯೂ ವ್ಯತ್ಯಾಸವಾಗಿರುವುದು ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ವಿಶ್ಲೇಷಿಸಿದ್ದಾರೆ.

RELATED ARTICLES

Latest News