Thursday, April 16, 2026
Homeರಾಜ್ಯಚಿನ್ನ-ಬೆಳ್ಳಿ ದರ ಸತತ ಇಳಿಕೆ : ಆಭರಣ ಕೊಳ್ಳಲು ಇದು ಸರಿಯಾದ ಸಮಯವೇ..?

ಚಿನ್ನ-ಬೆಳ್ಳಿ ದರ ಸತತ ಇಳಿಕೆ : ಆಭರಣ ಕೊಳ್ಳಲು ಇದು ಸರಿಯಾದ ಸಮಯವೇ..?

Gold and silver prices continue to fall: Is this the right time to buy jewellery?

ಬೆಂಗಳೂರು,ಫೆ.3- ಸತತ ನಾಲ್ಕನೇ ದಿನವೂ ಚಿನ್ನ, ಬೆಳ್ಳಿ ದರಗಳು ಇಳಿಕೆಯಾಗಿದ್ದು, ಗ್ರಾಹಕರು ಸಮಾಧಾನಪಡುವಂತಾಗಿದೆ. ತೀವ್ರ ಏರುಗತಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಜ.30 ರಿಂದ ಇಳಿಮುಖವಾಗುತ್ತಿವೆ.

ಇಂದು 24 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 142 ರೂ., 22ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 130 ರೂ. ಹಾಗೂ 18 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 107 ರೂ. ಇಳಿಕೆಯಾಗಿದೆ. ಬೆಳ್ಳಿ ಪ್ರತೀ ಕೆಜಿಗೆ 20 ಸಾವಿರ ರೂ. ಇಳಿಕೆಯಾಗಿದ್ದು, 2,80,000 ರೂ.ಗಳಷ್ಟಿದೆ. 4 ದಿನಗಳಲ್ಲಿ 1,30,000 ರೂ.ಗಳಷ್ಟು ಬೆಳ್ಳಿ ಪ್ರತಿ ಕೆಜಿಗೆ ಇಳಿಕೆಯಾಗಿದೆ. ಪ್ರತಿ ಗ್ರಾಂಗೆ 20 ರೂ. ಇಳಿಕೆಯಾಗಿದ್ದು, ಪ್ರಸ್ತುತ 280 ರೂ. ದರವಿದೆ. ನಿನ್ನೆ ಪ್ರತೀ ಕೆಜಿ ಬೆಳ್ಳಿಗೆ 50 ಸಾವಿರ ರೂ. ಇಳಿಕೆಯಾಗಿತ್ತು.

24 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನ 15,75 ರೂ., 22 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನ 13,910 ರೂ., 18 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನ 11,381 ರೂ. ಇದೆ.ನಿನ್ನೆ ಕ್ರಮವಾಗಿ 24 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನ 142 ರೂ. ಹಾಗೂ 22 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನ 130 ರೂ. ಇಳಿಕೆಯಾಗಿತ್ತು.

ಕಳೆದ 4 ದಿನಗಳಲ್ಲಿ 24 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನ 2,710 ರೂ.ನಷ್ಟು ಕಡಿಮೆಯಾಗಿದೆ. ಜ.29 ರಂದು 17,785ರೂ.ನಷ್ಟಿತ್ತು. ಅದೇ ರೀತಿ 22 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನ 2,485 ರೂ.ಗಳ್ಟು ಕಡಿಮೆಯಾಗಿದೆ. ಜ.29 ರಂದು 16,395 ರೂ.ನಷ್ಟಿತ್ತು.

RELATED ARTICLES

Latest News