Monday, October 28, 2024
Homeಅಂತಾರಾಷ್ಟ್ರೀಯ | Internationalಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಬೇಟೆಯಾಡಿದ 'ಅಪರಿಚಿತ' ಬಂಧೂಕುದಾರಿ

ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಬೇಟೆಯಾಡಿದ ‘ಅಪರಿಚಿತ’ ಬಂಧೂಕುದಾರಿ

ಇಸ್ಲಮಾಬಾದ್,ನ.10- ಪಾಕಿಸ್ತಾನದ ಬಜೌರ್ ಜಿಲ್ಲೆಯಲ್ಲಿ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್‍ನನ್ನು ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಘಾಜಿ ಕೊಲೆಯಾದವನು.

ಅಕ್ರಮ್ ಖಾನ್ 2018-2020ರ ಅವಧಿಯಲ್ಲಿ ಲಷ್ಕರ್‍ಗೆ ಉನ್ನತ ನೇಮಕಾತಿದಾರರಲ್ಲಿ ಒಬ್ಬನಾಗಿದ್ದ. ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರ ಕಣಿವೆಗೆ ಅನೇಕ ಬ್ಯಾಚ್‍ಗಳಲ್ಲಿ ನುಸುಳಿದ ಹಲವಾರು ಭಯೋತ್ಪಾದಕರ ಜವಾಬ್ದಾರಿಯನ್ನು ಹೊತ್ತಿದ್ದ. ಈ ವೇಳೆ ಉಗ್ರ ಸಂಘಟನೆಗೆ ಬೇಕಾದ ಯುವಕರನ್ನು ಉದ್ಯೋಗದ ಹೆಸರಲ್ಲಿ ನೇಮಕ ಮಾಡಿಕೊಂಡು ಅವರಿಗೆ ಭಯೋತ್ಪಾದನೆ ಬಗ್ಗೆ ತರಬೇತಿ ನೀಡುತ್ತಿದ್ದ.

ಜಮ್ಮು ಮತ್ತು ಕಾಶ್ಮೀರದಲ್ಲಿ 2018 ರ ಸುಂಜ್ಜಾನ್ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್‍ಗಳಲ್ಲಿ ಒಬ್ಬನಾಗಿದ್ದ ಖ್ವಾಜಾ ಶಾಹಿದ್‍ನನ್ನು ಭಾನುವಾರ ಅಪಹರಿಸಲಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಶಿರಚ್ಛೇದ ಮಾಡಲಾಯಿತು.

ವಿಮಾನ ಸ್ಫೋಟಿಸುವ ಖಲಿಸ್ತಾನಿ ಉಗ್ರನ ಬೆದರಿಕೆಯ ತನಿಖೆ ಆರಂಭಿಸಿದ ಕೆನಡಾ

ಘಾಜಿ ಹತ್ಯೆಯಲ್ಲಿ ವಿವಿಧ ಭಯೋತ್ಪಾದಕ ಗುಂಪುಗಳು ಸೇರಿದಂತೆ ಸ್ಥಳೀಯ ವಿರೋಗಳ ಪಾತ್ರ ಇರಬಹುದು ಎನ್ನಲಾಗಿದೆ. ಘಾಜಿ ಲಷ್ಕರ್ ಕೇಂದ್ರ ನೇಮಕಾತಿ ಸೆಲ್‍ನ ಪ್ರಮುಖ ಸದಸ್ಯನಾಗಿದ್ದ. ಭಾರತದ ವಿರುದ್ಧ ದ್ವೇಷ ತುಂಬಿದ ಭಾಷಣಗಳಿಗೆ ಹೆಸರುವಾಸಿಯಾಗಿದ್ದ.

RELATED ARTICLES

Latest News