Monday, April 28, 2025
Homeಮನರಂಜನೆಯುಕೆ ಪ್ರವಾಸ ಮುಂದೂಡಿದ ನಟ ಸಲ್ಮಾನ್ ಖಾನ್

ಯುಕೆ ಪ್ರವಾಸ ಮುಂದೂಡಿದ ನಟ ಸಲ್ಮಾನ್ ಖಾನ್

Actor Salman Khan postpones UK tour

ನವದೆಹಲಿ, ಏ.28– ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂಬರುವ ಯುಕೆ ಪ್ರವಾಸವನ್ನು ಮುಂದೂಡಿದ್ದಾರೆ.ಮಾಧುರಿ ದೀಕ್ಷಿತ್ ನೇನೆ, ಟೈಗರ್ ಶ್ರಾಫ್, ವರುಣ್ ಧವನ್, ಕೃತಿ ಸನೋನ್, ಸಾರಾ ಅಲಿ ಖಾನ್, ದಿಶಾ ಪಟಾನಿ, ಸುನಿಲ್ ಗೋವರ್ ಮತ್ತು ಮನೀಶ್ ಪಾಲ್ ಅವರೊಂದಿಗೆ ದಿ ಬಾಲಿವುಡ್ ಬಿಗ್ ಒನ್ ಕಾರ್ಯಕ್ರಮದ ಭಾಗವಾಗಿ ಸಲ್ಮಾನ್ ಮೇ 4 ಮತ್ತು ಮೇ 5 ರಂದು ಮ್ಯಾಂಚೆಸ್ಟರ್ ಮತ್ತು ಲಂಡನ್‌ ನಲ್ಲಿ ಪ್ರದರ್ಶನ ನೀಡಬೇಕಿತ್ತು.

ಇನ್ಸಾ ಗ್ರಾಮ್ ನಲ್ಲಿ ಅವರು ನೀಡಿದ ಹೇಳಿಕೆಯಲ್ಲಿ, ನಮ್ಮ ತಂಡವು ಈ ದುಃಖದ ಸಮಯದಲ್ಲಿ ವಿರಾಮ ತೆಗೆದುಕೊಳ್ಳುವುದು ಸರಿಯಾಗಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ದುರಂತ ಘಟನೆಗಳ ಹಿನ್ನೆಲೆಯಲ್ಲಿ ಮತ್ತು ತೀವ್ರ ದುಃಖದಿಂದ, ಮ್ಯಾಂಚೆಸ್ಟ‌ರ್ ಮತ್ತು ಲಂಡನ್‌ನಲ್ಲಿ ಮೇ 4 ಮತ್ತು 5 ರಂದು ನಿಗದಿಯಾಗಿದ್ದ ಬಾಲಿವುಡ್ ಬಿಗ್ ಒನ್ ಪ್ರದರ್ಶನಗಳನ್ನು ಮುಂದೂಡುವಂತೆ ಪ್ರವರ್ತಕರನ್ನು ವಿನಂತಿಸಲು ನಾವು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ನಮ್ಮ ಅಭಿಮಾನಿಗಳು ಈ ಪ್ರದರ್ಶನಗಳನ್ನು ಎಷ್ಟು ಎದುರು ನೋಡುತ್ತಿದ್ದಾರೆಂದು ನಾವು ಅರ್ಥಮಾಡಿಕೊಂಡರೂ, ಈ ದುಃಖದ ಸಮಯದಲ್ಲಿ ವಿರಾಮ ತೆಗೆದುಕೊಳ್ಳುವುದು ಮಾತ್ರ ಸರಿ ಎಂದು ನಾವು ಭಾವಿಸುತ್ತೇವೆ. ಯಾವುದೇ ತಪ್ಪಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News