ಬೆಂಗಳೂರು, ಏ. 30- ಸಮಾನತೆಯ ಹರಿಕಾರ, ಕಾಯಕವೇ ಕೈಲಾಸ ಎಂದು ವಿಶ್ವಕ್ಕೆ ಸಂದೇಶ ಸಾರಿದ ಕಾಯಕಯೋಗಿ, ಮಹಾಮಾನವತಾವಾದಿ ಬಸವ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಶುಭಕೋರಿದ್ದಾರೆ.
ಕನ್ನಡದಲ್ಲಿ ಶುಭಕೋರಿರುವ ಮೋದಿ ಅವರು, ಬಸವ ಜಯಂತಿಯ ಶುಭ ಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರ ಆಳವಾದ ಜ್ಞಾನವನ್ನು ನಾವು ಸರಿಸುತ್ತೇವೆ. ಸಮಾಜಕ್ಕಾಗಿ ಅವರ ದೃಷ್ಟಿಕೋನ ಮತ್ತು ವಂಚಿತರನ್ನು ಮೇಲೆತ್ತಲು ಅವರ ಅವಿಶ್ರಾಂತ ಪ್ರಯತ್ನಗಳು ನಮಗೆ ಸದಾ ಮಾರ್ಗದರ್ಶನ ನೀಡುತ್ತಿರುತ್ತವೆ ಎಂದು ತಮ ಎಕ್‌್ಸ ಖಾತೆಯಲ್ಲಿ ಹೇಳಿದ್ದಾರೆ.
ಬೀದರ್‌ನ ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಈ ವೇದಿಕೆಯಲ್ಲಿ ಲಿಂಗಾಯತ ಆಧ್ಯಾತ ಸಂತರು ಮತ್ತು ತತ್ವಜ್ಞಾನಿಗಳ ಸಂಘವೊಂದು ಕಾರ್ಯನಿರ್ವಹಿಸುತ್ತಿತ್ತು. ಅವರು ತಮ ಜೀವನದ ಅನುಭವಗಳು, ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವಂತೆ ಮಾಡಿದ್ದರು.
ಯಡಿಯೂರಪ್ಪ ಶುಭಾಶಯ: ಶತಶತಮಾನಗಳ ಹಿಂದೆಯೇ ನಾಡಿನಲ್ಲಿ ಆಧ್ಯಾತಿಕ, ಸಾಮಾಜಿಕ, ಹಾಗೂ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಸಮಾಜ ಸುಧಾರಕ, ಶರಣ ಶ್ರೇಷ್ಠ, ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯಂದು ಆ ಯುಗಪುರುಷನಿಗೆ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ, ಸರ್ವರಿಗೂ ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ನಮಿಸೋಣ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. ವಚನ ಸಾಹಿತ್ಯದ ಮೂಲಕ ಸಮಾನತೆಯನ್ನು ಪ್ರತಿಪಾದಿಸಿ ಸಾಮಾಜಿಕ ಕ್ರಾಂತಿ ನಡೆಸಿದವರು. ಸಮಾಜದ ಕಟ್ಟಕಡೆಯ ವ್ಯಕ್ತಿಯು ನೆಮದಿಯಿಂದ ಬದುಕಲು ಅವಕಾಶ ಮಾಡಿಕೊಟ್ಟ ವಿಶ್ವಗುರು ಅಣ್ಣ ಬಸವಣ್ಣನವರಿಗೆ ನಮಿಸೋಣ ಎಂದು ಹೇಳಿದ್ದಾರೆ.