ನವದೆಹಲಿ, ಮೇ 12- ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಕಳೆದ 14 ವರ್ಷಗಳಿಂದ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿದ್ದ ವಿರಾಟ್ ಕೊಹ್ಲಿ ಇಂದು ತಮ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲೇ ಕೊಹ್ಲಿ ಅವರು ತಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ ರಾಜೀನಾಮೆ ವಿಷಯ ಬಹಿರಂಗಪಡಿಸಿದ್ದಾರೆ.
2011 ರಲ್ಲಿ ಭಾರತ ವಿಶ್ವಕಪ್ ಗೆದ್ದ ಸಂಪದದಲ್ಲಿ ಭಾಗವಾಗಲು ಎರಡು ತಿಂಗಳು ನಂತರ ಜಮೈಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಟೆಸ್ಟ್ ಜೀವನ ಆರಂಭಿಸಿದ ಕೊಹ್ಲಿ, 123 ಟೆಸ್ಟುಗಳಲ್ಲಿ ಕೊಹ್ಲಿ 9,230 ರನ್ ಗಳಿಸಿ 46.85ರ ರನ್ ರೇಟ್ ಹೊಂದಿದ್ದಾರೆ. ಅವರ ಈ ಸಾಧನೆಯಲ್ಲಿ 30 ಶತಕಗಳು ಮತ್ತು 31 ಅರ್ಧ ಶತಕಗಳನ್ನು ಭಾರಿಸಿದ್ದಾರೆ.
2019 ರಲ್ಲಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್‌ನಲ್ಲಿ ದಕ್ಷಿಣ ಆಫ್ರಿಕ ವಾದ ವಿರುದ್ಧ ಅವರು ಬರೊಬ್ಬರಿ 254 ರನ್ ಭಾರಿಸಿರುವುದು ವಿಶೇಷವಾಗಿದೆ. ತಾವು ರಾಜೀನಾಮೆ ನೀಡುವ ಒಂದು ದಿನದ ಮೊದಲೇ ತಮ ನಿರ್ಧಾರವನ್ನು ಅವರು ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದ್ದರು.
ಆದರೆ ಇಂಗ್ಲೆಂಡ್ ಟೆಸ್ಟ್‌ವರೆಗೂ ತಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಬಿಸಿಸಿಐ ಮಾಡಿಕೊಂಡ ಮನವಿಯನ್ನು ಅವರು ನಿರಾಕಿರಿಸುವ ಮೂಲಕ ಅವರು ಟೆಸ್ಟ್ ಜೀವನದಿಂದ ಮುಕ್ತಿ ಹೊಂದಿದ್ದಾರೆ.
ಕಳೆದ ಮೇ 7 ರಂದು ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಅವರ ಹಾದಿಯಲ್ಲೇ ಸಾಗಿರುವ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದು ತಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.