Wednesday, May 14, 2025
Homeಬೆಂಗಳೂರುಅಂತಾರಾಜ್ಯ ಕುಖ್ಯಾತ ಮನೆಗಳ್ಳನ ಬಂಧನ

ಅಂತಾರಾಜ್ಯ ಕುಖ್ಯಾತ ಮನೆಗಳ್ಳನ ಬಂಧನ

Notorious interstate burglar arrested

ಬೆಂಗಳೂರು,ಮೇ 13- ಮನೆಗಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕುಖ್ಯಾತ ಕಳ್ಳನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿ 9.20 ಲಕ್ಷ ರೂ. ಮೌಲ್ಯದ 148 ಗ್ರಾಂ ಚಿನ್ನಾಭರಣ ಹಾಗೂ 200 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ನಿವಾಸಿ ಶ್ರೀನಿವಾಸ (42) ಬಂಧಿತ ಆರೋಪಿ. ಈತ ನಗರದ ನಾಗವಾರದಲ್ಲಿ ಪಿಜಿಯಲ್ಲಿ ವಾಸವಾಗಿದ್ದನು.ಈತನ ವಿರುದ್ಧ ಕರ್ನಾಟಕ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ಒಟ್ಟು 88 ಪ್ರಕರಣಗಳಿವೆ.

1998 ರಿಂದಲೂ ಮನೆಗಳ್ಳತನ ಮಾಡುತ್ತಿದ್ದ ಈತ ಈ ಹಿಂದೆ ಜೆಬಿ ನಗರದಲ್ಲಿ ಮನೆಗಳ್ಳತನ ಮಾಡಿದ್ದನು. ಇದೀಗ ಈತನ ಬಂಧನದಿಂದ ಕೊಡುಗೆಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.

ಬಾಲಾಜಿ ಲೇಔಟ್‌ನ ನಿವಾಸಿಯೊಬ್ಬರು ಬೆಳಿಗ್ಗೆ ಮನೆಯ ಮುಂಬಾಗಿಲಿಗೆ ಬೀಗ ಹಾಕಿಕೊಂಡು ಇಸ್ಕಾನ್‌ ದೇವಸ್ಥಾನಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಸಂಜೆ ವಾಪಸ್‌‍ ಬರುವಷ್ಟರಲ್ಲಿ ಮನೆಯ ಮುಂಬಾಗಿಲಿನ ಲಾಕ್‌ ಒಡೆದಿರುವುದು ಕಂಡುಬಂದಿದೆ. ತಕ್ಷಣ ಅವರು ಮನೆಯ ಒಳಗೆ ಹೋಗಿ ನೋಡಿದಾಗ ಕೊಠಡಿಯ ಬೀರುನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳು ಕಳವು ಆಗಿರುವುದು ಗೊತ್ತಾಗಿದೆ.

ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನಾಗವಾರದಲ್ಲಿರುವ ಪಿ.ಜಿ ಯೊಂದರ ಮುಂಭಾಗ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಇದೇ ವ್ಯಾಪ್ತಿಯ ಮತ್ತೊಂದು ಮನೆಯಲ್ಲಿ ಸುಮಾರು 3 ಗ್ರಾಂ ಚಿನ್ನದ ಓಲೆ ಮತ್ತು 200 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣವನ್ನು ಮೈಸೂರಿನ ರಾಘವೇಂದ್ರ ಬಡಾವಣೆಯಲ್ಲಿರುವ ಸ್ನೇಹಿತನಿಗೆ ನೀಡಿರುವುದಾಗಿ ಹಾಗೂ ಬೆಳ್ಳಿಯ ವಸ್ತುಗಳನ್ನು ತಾನು ವಾಸವಿರುವ ಪಿ.ಜಿ ಯಲ್ಲಿಟ್ಟಿರುವುದಾಗಿ ತಿಳಿಸಿದ್ದಾನೆೆ. ಈತನ ಮಾಹಿತಿ ಮೇರೆಗೆ ಪಿಜಿ ಯಲ್ಲಿಟ್ಟಿದ್ದ ಹಾಗೂ ಸ್ನೇಹಿತನಿಗೆ ನೀಡಿದ್ದ ಬೆಳ್ಳಿ ವಸ್ತುಗಳು ಹಾಗೂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇದರ ಒಟ್ಟು ಮೌಲ್ಯ 9.20 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

RELATED ARTICLES

Latest News