ಬೆಂಗಳೂರು,ನ.12- ದೇಶದಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಒನ್ ಸ್ಟೇಟ್-ಮೆನಿ ಎಲೆಕ್ಷನ್ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಅನಾನುಕೂಲಗಳ ಬಗ್ಗೆ ಸುದೀರ್ಘ ವಿವರಣೆ ನೀಡಿದ ಅವರು, ಪಂಚ ರಾಜ್ಯದ ಚುನಾವಣೆಯಲ್ಲೂ ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಭರವಸೆಯನ್ನು ಕಾಂಗ್ರೆಸ್ ನೀಡುತ್ತಿದೆ. ಅಲ್ಲಿನ ಮತದಾರರು ಮರುಳಾಗಬಾರದು. ಗ್ಯಾರಂಟಿ ಯೋಜನೆಗಳು ಆಶಾದಾಯಕವಾಗಿಲ್ಲ ಎಂದರು.
ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆಬಂದಿದ್ದು, ಜನರ ಬದುಕಿನ ಭಾಗ್ಯದ ಬಾಗಿಲು ತೆಗೆದಿದ್ದೇವೆ ಎಂದು ಹೇಳುತ್ತಿದ್ದೆ. ಪ್ರತಿ ದಿನ ಕಾಂಗ್ರೆಸ್ ನಾಯಕರಿಂದ ಐದು ಗ್ಯಾರಂಟಿಗಳ ಭಜನೆಗಳನ್ನು ನಿತ್ಯ ಕೇಳುತ್ತಿದ್ದೇವೆ ಎಂದು ಟೀಕಿಸಿದರು.
ಗ್ಯಾರಂಟಿಗಳನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಹೊರಟಿದೆ. ತೆಲಂಗಾಣ ಚುನಾವಣೆಗೆ ಟಿಸಿಎಂ, ಡಿಸಿಎಂ(ಟೆಂಪ್ರವರಿ ಚೀಫ್ ಮಿನಿಸ್ಟರ್, ಡ್ಯುಪ್ಲಿಕೇಟ್ ಚೀಫ್ ಮಿನಿಸ್ಟರ್) ಉಸ್ತುವಾರಿ ಇದ್ದಾರೆ. ಐದು ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳೋಕೆ ಹೋಗಿ ಬೇರೆ ರಾಜ್ಯದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿಗಳು ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ 6 ಗ್ಯಾರಂಟಿ ಜಾರಿ ಮಾಡೋದಾಗಿ ಹೇಳಿದೆ. ಉಚಿತ ಗ್ಯಾರಂಟಿಗಳ ಕುರಿತಂತೆ ಮೋಸ ಹೋಗದೆ ಎಚ್ಚರಿಕೆಯಿಂದ ಇರಿ ಎಂದ ಅವರು ಪಂಚ ರಾಜ್ಯದ ಮತದಾರರಿಗೆ ಗ್ಯಾರಂಟಿ ಯೋಜನೆಗೆ ಮಾರುಹೋಗಬೇಡಿ ಎಂದು ಮನವಿ ಮಾಡಿದರು.
ಎರಡೂವರೆ ಸಾವಿರ ಲಕ್ಷ ಹುದ್ದೆ ಖಾಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಆಡಳಿತಾವಯಲ್ಲಿ ಎರಡು ಮುಕ್ಕಾಲು ಲಕ್ಷ ಸರ್ಕಾರಿ ನೌಕರರ ನೇಮಕಾತಿ ಏಕೆ ಆಗಿಲ್ಲ. ಸದ್ಯ ರಾಜ್ಯದಲ್ಲಿ ಎರಡೂವರೆ ಸಾವಿರ ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಏಕೆ ನೇಮಕಾತಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಬೇರೆ ರಾಜ್ಯದ ಪ್ರನಾಳಿಕೆಯಲ್ಲಿ ಘೋಷಿಸುವ ಬದಲು ಮೊದಲು ನಮ್ಮ ರಾಜ್ಯದಲ್ಲಿ ಸರ್ಕಾರಿ ನೌಕರರ ನೇಮಕ ಮಾಡಿಲಿ. ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ನೌಕರರ ಕೊರತೆ ಇದೆ ಎಂದರು.
ಬಿಜೆಪಿ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ಕೊಡ್ತಿತ್ತು. ತೆಲಂಗಾಣದಲ್ಲಿ ರೈತರಿಗೆ 15 ಸಾವಿರ ಕೊಡುವುದಾಗಿ ಡ್ಯುಪ್ಲಿಕೇಟ್ ಸಿಎಂ ಹೇಳಿದ್ದಾರೆ. ಆದರೆ ರಾಜ್ಯದ ರೈತರ ಹಿತ ಕಾಪಾಡುವ ಕೆಲಸ ಮರೆತು ಹೋಯಿತೆ ಎಂದು ಟೀಕಿಸಿದರು. ರೈತರಿಗೆ ಈ ಹಿಂದೆ ನೀಡುತ್ತಿದ್ದ 4 ಸಾವಿರ ಯಾಕೆ ಕಡಿತ ಮಾಡಿದಿರಿ? ಟಾರ್ಚ್ ಬೆಳಕಲ್ಲಿ ಅಕಾರಿ ಕೆಲಸ ಮಾಡಿದ್ದನ್ನ ಪ್ರಸ್ತಾಪಿಸಿದ ಹೆಚ್ ಡಿಕೆ, ಗೃಹ ಜ್ಯೋತಿ ಹೆಸರಲ್ಲಿ ಕತ್ತಲ ಭಾಗ್ಯ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು.
ರೈತರಿಗೆ 24 ಗಂಟೆ ವಿದ್ಯುತ್ ನೀಡದ ಸರ್ಕಾರ ಬೇರೆ ರಾಜ್ಯದಲ್ಲಿ 24 ಗಂಟೆ ವಿದ್ಯುತ್ ನೀಡುವ ಕುರಿತು ಮಾತನಾಡುತ್ತಾರೆ. ಉಚಿತ ವಿದ್ಯುತ್ ಹೆಸರಲ್ಲಿ ಆಗಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಚುನಾವಣೆಗೂ ಮೊದಲು ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್ ನಿಂಗೂ ಫ್ರೀ ಅಂತ ಘೋಷಿಸಿದ್ದರು. ಈಗ ಮಹದೇವಪ್ಪ ನಿಂಗೂ ಕತ್ತಲು ಕಾಕಾ ಪಾಟೀಲ್ ನಿಂಗೂ ಕತ್ತಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಧನ ಇಲಾಖೆ ಅಧೋಗತಿಗೆ ತಲುಪಿದೆ ಎಂದು ವಾಗ್ದಾಳಿ ನಡೆಸಿದರು.
ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ. ಕೇವಲ ನಾಮಾಕಾವಸ್ತೆ ಎನ್ನುವಂತೆ ಯೋಜನೆ ಜಾರಿ ಮಾಡಲಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ 1.40 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ತಲುಪಿಲ್ಲಎಂದು ಅವರು ಆರೋಪಿಸಿದರು.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಕಲ್ಪಿಸಿದ್ದಾರೆ. ಆದರೆ, ವಿದ್ಯಾರ್ಥಿಗಳು ಜೆಸಿಬಿಯಲ್ಲಿ ಪ್ರಯಾಣಿಸುವಂತಾಗಿದೆ. ಆಟೋ ಚಾಲಕರ ಜೀವನ ದುಸ್ತರವಾಗಿದೆ. ಇಂದಿರಾ ಕ್ಯಾಂಟೀನ್, ಗುತ್ತಿಗೆದಾರರಿಂದ ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡುವುದು ಸರಿನಾ ಎಂದ ಅವರು, ಗ್ಯಾರಂಟಿ ಜಾರಿಗಾಗಿ ಸಾಲ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ, ಧರಂಸಿಂಗ್, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವಧಿಯ 12 ವರ್ಷದಲ್ಲಿ 1 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೊದಲ ಐದು ವರ್ಷದಲ್ಲು 2.42 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದ ಅವರು, ಪ್ರಧಾನಿ ಅವರು ಮಾಡಿರುವ ಸಾಲದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಈಗ 5 ಲಕ್ಷದ 71 ಸಾವಿರ 655. ಕೋಟಿ ರಾಜ್ಯದ ಸಾಲ ಇದೆ. ಈ ವರ್ಷ 85,815 ಕೋಟಿ ಸಾಲದ ಗುರಿ ಇಟ್ಟುಕೊಂಡಿದ್ದೀರಿ. ಗ್ಯಾರಂಟಿಗಳ ಜಾರಿಗೆ 56 ಸಾವಿರ ಕೋಟಿ ಸಾಲ ಕಟ್ಟಬೇಕು. ಐದು ತಿಂಗಳಲ್ಲಿ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ದುಡ್ಡಿಗೆ ಕೊರತೆ ಇಲ್ಲ ಎನ್ನುವುದು ಐಟಿ ದಾಳಿಯಲ್ಲಿ ಬಟಾಬಯಲಾಗಿದೆ ಎಂದು ಆರೋಪಿಸಿದರು. ಯುವನಿ ಹೆಸರಲ್ಲಿ ಯುವಕರಿಗೆ ಉಂಡೆನಾಮ ಹಾಕುವ ಕೆಲಸವಾಗುತ್ತಿದೆ. ಚುನಾವಣೆಗಾಗಿ ರಾಜ್ಯದ ಜನತೆಯ ದಾರಿ ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಆರೋಪ ಮಾಡಿದರು.ಯರಗೋಳ ಅಭಿವೃದ್ಧಿಗೆ ಮೊದಲು ಹಣ ಕೊಟ್ಟಿದ್ದು ಕುಮಾರಸ್ವಾಮಿ ಅಂತಾ ಗೊತ್ತಿರಲಿ ಎಂದು ಸಿಎಂಗೆ ತಿರುಗೇಟು ನೀಡಿದರು.
ಅಭಿವೃದ್ಧಿ ಕಾರ್ಯಕ್ರಮ ಗಳಿಗೆ ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ ಇದೆ. ಆದರೆ, ಬ್ಲಾಕ್ ಮನಿಗೇನೂ ಕೊರತೆ ಇಲ್ಲ. ಯಾವ ಯಾವ ಅಧಿಕಾರಿಗಳ ಮನೆಯಲ್ಲಿ ಎಷ್ಟು ಹಣ ಸಿಕ್ಕಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಗ್ಯಾರಂಟಿಗಳ ಮೂಲಕ ವೈಎಸ್ಟಿ,ಎಸ್ ಎಸ್ಟಿ ಟ್ಯಾಕ್ಸ್ ಬೇರೆ ರಾಜ್ಯದಲ್ಲಿ ಜಾರಿಗೆ ಹೊರಟ್ಟೀದಿರಿ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಸರ್ಕಾರ ನೊಟೀಸ್‍ನ ಮೇಲೆ ನಡೀತಿದೆ. ಸಿಎಂಗೆ ಹೈ ಕಮಾಂಡ್ ನೊಟೀಸ್ ಕೊಟ್ಟಿದೆ.
ಯಾರು ಹೆಚ್ಚು ಹಣ ಕೊಡ್ತಾರೋ ಅವರಿಗೆ ಅಧಿಕಾರ. ಇಂಥ ಟಾಸ್ಕ್ ನೀಡಿದೆ ಎಂಬ ಆರೋಪ ಮಾಡಿದರು. ಒಕ್ಕಲಿಗೆ ಲಿಂಗಾಯಿತ ಎಂಬುದಕ್ಕಿತ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವವರು ಬೇಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕವಾಗಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಉಪಸ್ಥಿತರಿದ್ದರು.