ಮುಂಬೈ, ಮೇ 14- ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಶುಭ ಹಾರೈಸಿದ್ದಾರೆ.
ತಮ 11 ವರ್ಷಗಳ ಟೆಸ್ಟ್ ಜೀವನದಲ್ಲಿ ಅನೇಕ ಅವಿಸರಣೀಯ ದಾಖಲೆಗಳನ್ನು ನಿರ್ಮಿಸಿರುವ ರೋಹಿತ್ ಶರ್ಮಾ ಅವರನ್ನು ಭೇಟಿ ಮಾಡಿದ್ದು ಸಂತಸವಾಗಿದ್ದು, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.