Saturday, May 2, 2026
Homeರಾಷ್ಟ್ರೀಯನಿವೃತ್ತ ಐಐಟಿ ಮಹಿಳಾ ಅಧಿಕಾರಿಗೆ 4.62 ಕೋಟಿ ರೂ. ವಂಚನೆ, ಇಬ್ಬರ ಬಂಧನ

ನಿವೃತ್ತ ಐಐಟಿ ಮಹಿಳಾ ಅಧಿಕಾರಿಗೆ 4.62 ಕೋಟಿ ರೂ. ವಂಚನೆ, ಇಬ್ಬರ ಬಂಧನ

Retired IIT Bombay medical officer duped of ₹4.62 cr; 2 held for giving accounts to cyber crooks

ಮುಂಬೈ, ಫೆ.6-ಸಿಬಿಐ ಅಧಿಕಾರಿಗಳು ಎಂದು ನಿವೃತ್ತ ಐಐಟಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ 4.62 ಕೋಟಿ ರೂ. ಸೈಬರ್‌ ವಂಚಕರು ಸುಲಿಗೆ ಮಾಡಿರುವ ಘಟನೆ ಇಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಜಾಲದಲ್ಲಿ ಕಮಿಷನ್‌ ಪಡದ ಇಬ್ಬರನ್ನು ಬಂಧಿಸಲಾಗಿದೆ.

ಹಿಂದೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತ ಜೀವನ ನಡೆಸುತ್ತಿದ್ದ 75 ವರ್ಷದ ಮಹಿಳೆಗೆ ಬೆದರಿಸಿ ಕೋಟ್ಯಾಂತರ ರೂ ದೋಚಿದ್ದರು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಭಂದಿಸಿದಂತೆ ನರೇಂದ್ರ ಸಿನ್ಹಾ ಮತ್ತು ಗುಂಜನ್‌ ದೇವಕುಮಾರ್‌ ದಿನೇಶ್ಚಂದ್ರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಮೊದಲು ದೂರಸಂಪರ್ಕ ಇಲಾಖೆಯ ಅಧಿಕಾರಿಯಂತೆ ನಟಿಸುವ ವ್‌ವ್ಯಕ್ತಿಯಿಂದ ವೀಡಿಯೊ ಕರೆಯನ್ನು ಮಹಿಳೆ ಸ್ವೀಕರಿಸಿದ್ದರು , ನಂತರ ಮತ್ತೊಬ್ಬ ಆರೋಪಿ ಐಪಿಎಸ್‌‍ ಅಧಿಕಾರಿಯಂತೆ ನಟಿಸಿ, ತನ್ನ ಆಧಾರ್‌ ಕಾರ್ಡ್‌ ಬಳಸಿಕೊಂಡು 6 ಕೋಟಿ ರೂ. ಅಕ್ರಮ ವರ್ಗಾವಣೆಗೆ ಬ್ಯಣಕ್‌ ಖಾತೆ ತೆರೆದು ಹಣ ದುರುಪಯೋಗಪಡಿಸಿಕೊಂಡಿದ್ದೀರ ಎಂದು ಬೆದರಿಸಲಾಯಿತು ಈ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿದ್ದು, ನಿಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಅವರಿಗೆ ತಿಳಿಸಲಾಯಿತು.

ಒತ್ತಡಕ್ಕೆ ಮಣಿದ ಮಹಿಳೆ ತನ್ನ ಬ್ಯಾಂಕ್‌ನಲ್ಲಿದ್ದ ಹಣವನ್ನು ಅಕ್ಟೋಬರ್‌ 2025 ಮತ್ತು ಜನವರಿ 2026 ರ ನಡುವೆ ಸೈಬರ್‌ ಅಪರಾಧಿಗಳು ಒದಗಿಸಿದ ಬ್ಯಾಂಕ್‌ ಖಾತೆಗಳಿಗೆ 4.62 ಕೋಟಿ ರೂ.ಗಳನ್ನು ವರ್ಗಾಯಿಸಿದರು. ಇತ್ತೀಚೆಗೆ ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡ ನಂತರ, ಮಹಿಳೆ ಪೊಲೀಸ್‌‍ ದೂರು ದಾಖಲಿಸಿದರು ಎಂದು ಅಧಿಕಾರಿ ಹೇಳಿದರು.

ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ವಂಚನೆ ಮತ್ತು ಅಪರಾಧಗಳ ಪ್ರಕರಣವನ್ನು ದಾಖಲಿಸಲಾಯಿತು ಮತ್ತು ನಂತರ ಹೆಚ್ಚಿನ ತನಿಖೆಗಾಗಿ ಪಶ್ಚಿಮ ಪ್ರದೇಶ ಸೈಬರ್‌ ಸೆಲ್‌ಗೆ ವರ್ಗಾಯಿಸಲಾಯಿತು ಎಂದು ಅವರು ಹೇಳಿದರು.

ಹಣದ ಹಾದಿಯ ತನಿಖೆಯ ಸಮಯದಲ್ಲಿ ಸಿನ್ಹಾ ಮತ್ತು ದಿನೇಶ್ಚಂದ್ರ ಅವರು ಬಹು ಬ್ಯಾಂಕ್‌ ಖಾತೆಗಳನ್ನು ತೆರೆದು ಸೈಬರ್‌ ವಂಚಕರಿಗೆ ಒದಗಿಸಿದ್ದರು ಎಂದು ಅಧಿಕಾರಿ ಹೇಳಿದರು. ಈ ಖಾತೆಗಳಿಗೆ ಜಮಾ ಮಾಡಿದ ಮೊತ್ತವನ್ನು ಸಿನ್ಹಾ ಮತ್ತು ದಿನೇಶ್ಚಂದ್ರ ಅವರು ಹಿಂಪಡೆದು ಕಮಿಷನ್‌ಗಾಗಿ ಸೈಬರ್‌ ಅಪರಾಧಿಗಳಿಗೆ ಹಸ್ತಾಂತರಿಸಿದರು.

ಆಧಾರದ ಮೇಲೆ, ಸೈಬರ್‌ ಸೆಲ್‌ ಇಬ್ಬರೂ ಆರೋಪಿಗಳನ್ನು ಬಂಧಿಸಿತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.

RELATED ARTICLES

Latest News