ನಾಗುರ,ಮೇ.24- ಪತ್ನಿಯೊಂದಿಗಿನ ಜಗಳದಿಂದ ಕೋಪಗೊಂಡ ಆಳಿಯ ಸಾರ್ವಜನಿಕವಾಗಿಯೇ ಮಾವನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಲ್ಲಿ ನಡೆದಿದೆ. ಬುಟಿಬೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೋರ್ಖೇಡಿ ಗ್ರಾಮದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಮಾವ ಅರುಣ್ ಜ್ಞಾನದೇವ್ ಭಗತ್ (65) ಅವರನ್ನು ಹರಿತವಾದ ವಸ್ತುವಿನಿಂದ ಇರಿದು ಆರೋಪಿ ಪಂಕಜ್ ದೇವರಾವ್ ಗಜ್ಜಿಯೆ (30 ಸ್ಥಳದಲ್ಲೇ ಕೊಂದಿದ್ದಾನೆ ಎಂದು ಅವರು ಹೇಳಿದರು.
ಆರೋಪಿ ಕಳೆದ ವರ್ಷ ಮದುವೆಯಾಗಿದ್ದ ನಂತರ ಕೌಟುಂಬಿಕ ಕಲಹದಿಂದಾಗಿ ಅದು ತಾರಕಕ್ಕೆ ಏರಿತ್ತು. ಇದರಿಂದ ಅಕೋಲಿಯಲ್ಲಿರುವ ಮಗಳಮನೆಗೆ ತಂದೆ ಬಂದಿದ್ದರು ಈ ವೇಲೆ ಗಂಡ ಹೊಡೆಯುತ್ತಾನೆ ಎಂದು ಅಳಲು ತೋಡಿಕೊಂಡಾಗ ಆಕೆಯನ್ನು ಕರೆದುಕೊಂಡು ತಮ್ಮ ಮನೆಗೆ ಹೋಗಿದ್ದರು.
ಇದರಿಂದ ಕೋಪಗೊಂಡ ಪಂಕಜ್ ದೇವರಾವ್ ಗಜ್ಜಿಯೆ ಅವರನ್ನು ಹಿಂಬಾಲಿಸಿದ್ದ ಬೋರ್ಖೇಡಿಯಲ್ಲಿರುವ ಅವರ ಮನೆಗೆ ಬಂದು ಮಾವನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ನಡು ರಸ್ತೆಗೆ ಹೊಡೆದಾಟ ನಡೆದು ಚೂರಿಯಿಂದ ಅಳಿಯ ಮಾವನಿಗೆ ಇರಿದು ಕೊಂದಿದ್ದಾನೆ.ಸದ್ಯ ಕೊಲೆ ಪ್ರಕರಣ ದಾಖಲಿಸಲಾಗಿದೆ ಪರಾರಿಯಾಗಿರುವ ಗಜ್ಜಿಯೆ ಬಮಧನಕ್ಕೆ ಬಲೆ ಬೀಸಲಾಗಿದೆ ಎಂದು ಅವರು ಹೇಳಿದರು.