ಹರಿಪ್ರಸಾದ್ ಹೇಳಿಕೆಗೆ ಕೆರಳಿದ ಬಿಜೆಪಿಗರು
ಬೆಂಗಳೂರು, ಫೆ.16- ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಬಿ,ಕೆ,ಹರಿಪ್ರಸಾದ್ ಅವರು ಆರ್.ಎಸ್.ಎಸ್ ಕಚೇರಿ ಇರುವ ನಾಗಪುರದ ಹೆಸರನ್ನು ಕನ್ನಡೀಕರಣ ಮಾಡಿ ಎಂದು ಹೇಳಿದ್ದು ಬಿಜೆಪಿಗರನ್ನು ಕೆರಳಿಸಿದ್ದು ಒಂದಷ್ಟು ಕಾಲ ಮಾತಿನ ಸಮರಕ್ಕೆ ನಾಂದಿಯಾಡಿತ್ತು. ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಕುರಿತು ನೀಡಿರುವ ಹೇಳಿಕೆಯ ವಿರುದ್ಧ ನಿಲುವಳಿ ಸೂಚನೆ ಮಂಡಿಸಿ ಪೂರ್ವ ಪ್ರಸ್ತಾವನೆ ಮಂಡಿಸಿದ ಹರಿಪ್ರಸಾದ್ ಅವರು, ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಕಚೇರಿಯಲ್ಲಿ 52 ವರ್ಷ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜವನ್ನೇ ಹಾರಿಸಲಿಲ್ಲ. […]