Monday, May 6, 2024
Homeರಾಷ್ಟ್ರೀಯಫೋನ್‍ನಲ್ಲಿ ಜೋರಾಗಿ ಮಾತಾಡಿದ ಮಗನನ್ನು ಕೊಂದ ತಂದೆ

ಫೋನ್‍ನಲ್ಲಿ ಜೋರಾಗಿ ಮಾತಾಡಿದ ಮಗನನ್ನು ಕೊಂದ ತಂದೆ

ನಾಗ್ಪುರ, ಮಾ 27- ಫೋನ್‍ನಲ್ಲಿ ಜೋರಾಗಿ ಮಾತನಾಡುವ ವಿಚಾರದಲ್ಲಿ ನಡೆದು ಜಗಳದಲ್ಲಿ ತಂದೆಯೇ ತನ್ನ ಮಗನನ್ನು ಕೊಂದಿರುವ ಘಟನೆ ಪಿಪ್ರಾ ಗ್ರಾಮದಲ್ಲಿ ನಡೆದಿದೆ.ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಪಿಪ್ರಾ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಆರೋಪಿ ರಾಮರಾವ್ ಕಾಕ್ಡೆಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ರಾತ್ರಿ ಜೋರಾಗಿ ಫೋನ್‍ನಲ್ಲಿ ಮಾತನಾಡುತ್ತಿದ್ದ ಮಗ ಸೂರಜ್‍ಗೆ ಸ್ಟೀಲ್(22)ಗೆ ತಂದೆ ರಾಮರಾವ್ ಮೆತ್ತಗೆ ಮಾತಾಡು ಎಂದು ಗದರಿದ್ದಾರೆ.ಇದರಿಂದ ತಂದೆ -ಮಗನ ನಡುವೆ ವಾಗ್ವಾದ ಮಡೆದು ಅದು ಬಡಿದಾಟಗೆ ಹೋಗಿದೆ.ಈ ವೇಳೆ ರಾಡ್‍ನಿಂದ ಸೂರಜ್ ತಲೆಗೆ ಹೊಡೆದಾಗ ಆತ ಕುಸಿದುಬಿದ್ದಿದ್ದಾನೆ ನಂತರ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಎಂದು ಬೇಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. .


ಘಟನೆ ವೇಳೆ ತಂದೆ-ಮಗ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣ ಖಲಿಸಲಾಗಿದ್ದು,ರಾಮರಾವ್ ಕಾಕ್ಡೆಯನ್ನು ಬಂಧಿಸಲಾಗಿದೆ,ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.

RELATED ARTICLES

Latest News