Friday, December 6, 2024
Homeರಾಷ್ಟ್ರೀಯ | Nationalಭಾರತ್ ಮಾತಾ ಕೀ ಜೈ ಘೋಷಣೆ ನಮ್ಮ ಹಕ್ಕು ; ಪ್ರಕಾಶ್ ಜಾವಡೇಕರ್

ಭಾರತ್ ಮಾತಾ ಕೀ ಜೈ ಘೋಷಣೆ ನಮ್ಮ ಹಕ್ಕು ; ಪ್ರಕಾಶ್ ಜಾವಡೇಕರ್

ತಿರುವನಂತಪುರಂ, ಮಾ 27 (ಪಿಟಿಐ) : ನಾವು ಸಮಾಜವನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ನೋಡುವುದಿಲ್ಲ ನಾವು ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಕೂಗುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ಕೇರಳ ಸಿಎಂ ಪಿಣರಾಯಿ ವಿಜಯನ್‍ಗೆ ತಿರುಗೇಟು ನೀಡಿದ್ದಾರೆ.

ಸಿಎಎ ವಿರುದ್ಧ ಮಲಪ್ಪುರಂನಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯನ್ ಅವರು ಭಾರತ್ ಮಾತಾ ಕಿ ಜೈ ಮತ್ತು ಜೈ ಹಿಂದ್ ಎಂಬ ಘೋಷಣೆಗಳ ಸೃಷ್ಟಿಕರ್ತರು ಮುಸಲ್ಮಾನರು. ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಮುಸ್ಲಿಂ ಕವಿಯೊಬ್ಬರು ರಚಿಸಿದ್ದಾರೆ ಎಂದು ತಿಳಿದ ನಂತರ ಬಿಜೆಪಿಯವರು ಭಾರತ್ ಮಾತಾ ಕಿ ಜೈ ಘೋಷಣೆ ಕೂಗುತ್ತಾರೆಯೇ ಎಂದು ಕೇರಳ ಸಿಎಂ ಬಿಜೆಪಿಯನ್ನು ಪ್ರಶ್ನಿಸಿದ್ದರು.

ಪಿಣರಾಯಿ ನಾವು ಸಮಾಜವನ್ನು ಜಾತಿ, ಧರ್ಮ ಅಥವಾ ಧರ್ಮದ ಪರಿಧಿಯಿಂದ ನೋಡುವುದಿಲ್ಲ. ನಾವು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮಾಡುತ್ತೇವೆ. ನೀವು ಜಪ ಮಾಡುತ್ತೀರಾ? ಎಂದು ಪಕ್ಷದ ಕೇರಳ ಉಸ್ತುವಾರಿಯೂ ಆಗಿರುವ ಜಾವಡೇಕರ್ ಅವರು ಎಕ್ಸ್ ಮಾಡಿದ್ದಾರೆ.

ನಮಗೆ ದೇಶದಲ್ಲಿರುವ ಜನರೆಲ್ಲಾ ಒಂದೇ ಎಂಬ ಭಾವನೆಯಿಂದ ಬದುಕುತ್ತಿದ್ದೇವೆ ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಯಾರೇ ಸೃಷ್ಟಿಸಿರಲಿ ಅದು ನಮ್ಮ ತಾಯ್ನಾಡಿಗೆ ನೀಡಿರುವ ಗೌರವ ಅದನ್ನು ನಾವು ಗೌರವಿಸುತ್ತೇವೆ ಎಂದು ಅವರು ಹೇಳಿಕೊಂಡಿದ್ದಾರೆ.

RELATED ARTICLES

Latest News