Sunday, December 1, 2024
Homeರಾಷ್ಟ್ರೀಯ | Nationalದೆಹಲಿ : ರೆಸ್ಟೋರೆಂಟ್ ಮಾಲೀಕನ ಗುಂಡಿಕ್ಕಿ ಹತ್ಯೆ

ದೆಹಲಿ : ರೆಸ್ಟೋರೆಂಟ್ ಮಾಲೀಕನ ಗುಂಡಿಕ್ಕಿ ಹತ್ಯೆ

ನವದೆಹಲಿ, ಮಾ 27- ರೆಸ್ಟೋರೆಂಟ್ ಮಾಲೀಕನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಕಳೆದ ರಾತ್ರಿ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್‍ಪುರ ಪ್ರದೇಶದಲ್ಲಿ ನಡೆದಿದೆ.ಸಂಜಯ್ ಸಿಂಗ್ (32)ಕೊಲೆಯಾದ ರೆಸ್ಟೋರೆಂಟ್ ಮಾಲೀಕ ಎಂದು ಗುರುತಿಸಲಾಗಿದೆ.

ಮಧ್ಯರಾತ್ರಿ ರೆಸ್ಟೋರೆಂಟ್‍ನಿಂದ ಹಿಂತಿರುಗುತ್ತಿದ್ದಾಗ ಅವರ ಮನೆಯ ಬಳಿ ದಾಳಿ ನಡೆಸಿದ್ದರು.ಸಿಂಗ್‍ನ ಸ್ನೇಹಿತರೊಬ್ಬರು ರಸ್ತೆಯಲ್ಲಿ ಗಾಯಗೊಂಡು ಬಿದ್ದಿರುವುದನ್ನು ಕಂಡು ಸಂಜಯ್ ಸಿಂಗ್‍ನ ಕಿರಿಯ ಸಹೋದರ ನಿತಿನ್‍ಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿತಿನ್ ಸ್ಥಳಕ್ಕೆ ಧಾವಿಸಿದಾಗ ಸಿಂಗ್ ಹನುಮಾನ್ ಮಂದಿರ ವಾಲಿ ಗಾಲಿ ಸರ್ವಿಸ್ ರಸ್ತೆಯ ಬಳಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆತಂಕಗೊಂಡಿದ್ದಾರೆ.ಸಿಂಗ್ ಅವರ ತಲೆ, ಬಲ ಭುಜ ಮತ್ತು ಮೊಣಕೈ ಮತ್ತು ಹೊಟ್ಟೆಗೆ ಗಾಯವಾಗಿ ಆತನನ್ನು ತಕ್ಷಣವೇ ಜಗ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಏಳು ಖಾಲಿ ಬುಲೆಟ್ ಶೆಲ್‍ಗಳುಹಾಗು ಇತರ ವಸ್ತು ಪತ್ತೆಯಾಗಿದೆ ರವೀಂದರ್ ಎಂಬ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು ಇದೇ ದ್ವೇಷಕ್ಕೆ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ,ಪ್ರಕರಣದ ಎಲ್ಲಾ ಕೋನಗಳನ್ನು ನೋಡಲಾಗುತ್ತಿದೆ ಮತ್ತು ಕೊಲೆಗಾರರ ಪತ್ತೆಗೂ ಮುಂದಾಗಿದ್ದೇವೆ ಎಂದು ಹೇಳಿದರು.

RELATED ARTICLES

Latest News