Sunday, June 8, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-06-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-06-2025)

Today's Horoscope

ನಿತ್ಯ ನೀತಿ : ಅದೃಷ್ಟದಿಂದ ಬಂದಿದ್ದು ಅಹಂಕಾರ ಕೊಡುತ್ತೆ. ಬುದ್ಧಿ ಉಪಯೋಗಿಸಿ ಸಂಪಾದಿಸಿದ್ದು ಸಂತೋಷ ಕೊಡುತ್ತೆ. ಕಷ್ಟಪಟ್ಟು ಸಂಪಾದಿಸಿದ್ದು ಸಂತೃಪ್ತಿ ಕೊಡುತ್ತೆ.

ಪಂಚಾಂಗ : ಶನಿವಾರ 07-06-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಚಿತ್ತಾ / ಯೋಗ: ವರೀಯಾನ್‌ / ಕರಣ: ಭವ
ಸೂರ್ಯೋದಯ – ಬೆ.05.53
ಸೂರ್ಯಾಸ್ತ – 06.45
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುವುದು ಒಳಿತು.
ವೃಷಭ: ಅಂದುಕೊಂಡಿದ್ದ ಕೆಲಸಗಳು ಉತ್ತಮ ವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ಮಿಥುನ: ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಕಟಕ: ಮಾತನಾಡುವಾಗ ಎಚ್ಚರಿಕೆ ಇರಲಿ.
ಸಿಂಹ: ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ.
ಕನ್ಯಾ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.

ತುಲಾ: ಕಷ್ಟದ ಪರಿಸ್ಥಿತಿ ಯಲ್ಲಿ ಜನಬಲದ ಕೊರತೆ ಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ವೃಶ್ಚಿಕ: ನಿಮ್ಮಲ್ಲಿರುವ ಆಲಸ್ಯ ತಂದೆಯ ಮಾರ್ಗದರ್ಶನದಿಂದ ದೂರವಾಗಲಿದೆ.
ಧನುಸ್ಸು: ಅನ್ಯರಿಗೆ ಉಪಕಾರ ಮಾಡುವಿರಿ.

ಮಕರ: ವ್ಯವಹಾರದಲ್ಲಿ ಮೋಸವಾಗಬಹುದು. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ.
ಕುಂಭ: ಆದಾಯ ಹೆಚ್ಚಲಿದೆ.
ಮೀನ: ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.

RELATED ARTICLES

Latest News