Sunday, June 8, 2025
Homeಬೆಂಗಳೂರುಸೂಟ್‌ಕೇಸ್‌‍ನಲ್ಲಿ ಬಾಲಕಿ ಶವ ಪತ್ತೆ ಪ್ರಕರಣ : ಬಿಹಾರದ 7 ಮಂದಿ ವಿಚಾರಣೆ

ಸೂಟ್‌ಕೇಸ್‌‍ನಲ್ಲಿ ಬಾಲಕಿ ಶವ ಪತ್ತೆ ಪ್ರಕರಣ : ಬಿಹಾರದ 7 ಮಂದಿ ವಿಚಾರಣೆ

Girl's body found in Suitcase case: 7 people from Bihar questioned

ಬೆಂಗಳೂರು,ಜೂ.7-ಸೂಟ್‌ಕೇಸ್‌‍ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ 7 ಮಂದಿಯನ್ನು ಸೂರ್ಯನಗರ ಠಾಣೆ ಪೊಲೀಸರು ಬಿಹಾರದಿಂದ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಚಂದಾಪುರ ರೈಲ್ವೆ ಬ್ರಿಡ್‌್ಜ ಬಳಿ ಮೇ.21 ರಂದು ಸೂಟ್‌ಕೇಸ್‌‍ ಪತ್ತೆಯಾಗಿತ್ತು. ಆ ಸೂಟ್‌ಕೇಸ್‌‍ ಅನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ 17 ವರ್ಷದ ಬಿಹಾರ ಮೂಲದ ಬಾಲಕಿಯ ಶವ ಇರುವುದು ಕಂಡು ಬಂದಿತ್ತು.

ಈ ಬಾಲಕಿ ಯಾರು,ಏತಕ್ಕಾಗಿ ಯಾರು ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಸೂರ್ಯನಗರ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾಗ ಕೊಲೆಯಾಗಿರುವ ಬಾಲಕಿ ಬಿಹಾರ ಮೂಲದ ರೀಮಾ ಎಂಬುವುದು ಗೊತ್ತಾಯಿತು.

ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಈ ಬಾಲಕಿಯನ್ನು ಬೇರೆ ಕಡೆ ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌‍ನಲ್ಲಿ ತುಂಬಿ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ತಂದು ಬಿಸಾಡಲಾಗಿದೆ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದೀಗ ಬಿಹಾರದ ನವಾಡ ಜಿಲ್ಲೆಯ 7 ಮಂದಿಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿ ಈ ಬಾಲಕಿಯನ್ನು ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

RELATED ARTICLES

Latest News