Homeಬೆಂಗಳೂರುಕಸ ವಿಲೇವಾರಿ ಟೆಂಡರ್‌ನಲ್ಲಿ ಮತ್ತೆ ಭಾರಿ ಗೋಲ್‌ಮಾಲ್‌ : ಒಂದೇ ಕುಟುಂಬಕ್ಕೆ 8 ಪ್ಯಾಕೇಜ್‌

ಕಸ ವಿಲೇವಾರಿ ಟೆಂಡರ್‌ನಲ್ಲಿ ಮತ್ತೆ ಭಾರಿ ಗೋಲ್‌ಮಾಲ್‌ : ಒಂದೇ ಕುಟುಂಬಕ್ಕೆ 8 ಪ್ಯಾಕೇಜ್‌

Another huge scam in garbage disposal tender: 8 packages for a single family

ಬೆಂಗಳೂರು.ಫೆ. 9- ಜಿಬಿಎ ವ್ಯಾಪ್ತಿಯ ಕಸ ವಿಲೇವಾರಿ ಟೆಂಡರ್‌ ಹಂಚಿಕೆಯಲ್ಲಿ ಮತ್ತೆ ಭಾರಿ ಗೋಲ್‌ಮಾಲ್‌ ನಡೆದಿರುವ ಸಾಧ್ಯತೆಗಳು ಕಂಡು ಬರುತ್ತಿವೆ. ನಗರದಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆಯಲ್ಲಿ ಆಂಧ್ರ ಮೂಲದ ಒಂದೇ ಕುಟುಂಬಕ್ಕೆ 8 ಪ್ಯಾಕೇಜ್‌‍ ನೀಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಸಾವಿರಾರು ಕೋಟಿ ರೂಪಾಯಿಗಳ ಬೆಂಗಳೂರು ನಗರದ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಗುತ್ತಿಗೆ ನೀಡುವ ಸಂಬಂಧ ರಾಜ್ಯ ಸರ್ಕಾರ ಹಲವು ಬಾರಿ ಟೆಂಡರ್‌ ಕರೆದಿತ್ತು.ಅದರೆ ಕೆಲ ನಿಯಮಗಳು ಹಾಗೂ ಮಾನದಂಡ ಇಲ್ಲದ ಕೆಲ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದ ಪರಿಣಾಮ ಟೆಂಡರ್‌ ಪ್ರಕ್ರಿಯೆ ಹಳ್ಳ ಹಿಡಿದಿತ್ತು.

ಅದರೆ ಕಳೆದ ತಿಂಗಳು ಹೊಸ ಟೆಂಡರ್‌ ಕರೆಯಲಾಗಿದ್ದು, ರಾಜ್ಯ ಸರ್ಕಾರ ಟೆಂಡರನ್ನು ಅಂತಿಮಗೊಳಿಸಿದೆ. ನಗರದ ತ್ಯಾಜ್ಯ ವಿಲೇವಾರಿ ಮಾಡೋದಕ್ಕೆ ಅಂತ ಸುಮಾರು 33 ಪ್ಯಾಕೇಜ್‌ ಗಳಿಗೆ ಟೆಂಡರ್‌ ಕರೆಯಲಾಗಿತ್ತು.ಅದರೆ ಈ ಟೆಂಡರ್‌ ನಲ್ಲಿ ಒಂದೇ ಕುಟುಂಬದ ಸುಮಾರು 8 ಜನರಿಗೆ ಈ ಬಹುಕೋಟಿ ಟೆಂಡರ್‌ ಸಿಕ್ಕಿರೋದು ಕೆಲ ಅನುಮಾನಗಳು ಹುಟ್ಟುಹಾಕಿದೆ.

ಅಂಧ್ರ ಮೂಲದ ಪನ್ನತಿ ರೆಡ್ಡಿ ಕುಟುಂಬಕ್ಕೆ ಟಿಕ್ನಿಕಲ್‌ ಅನುಮೋದನೆ ನೀಡಿ ಗುತ್ತಿಗೆ ನೀಡಲಾಗಿದೆ. ಇನ್ನೂ ಗುತ್ತಿಗೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ ಅಂತ ಬಿಜೆಪಿ ನಾಯಕರು ಅರೋಪ ಮಾಡಿದ್ದಾರೆ.ನಗರಪಾಲಿಕೆ ನಿಯಮ ಉಲ್ಲಂಘಿಸಿ ಕಪ್ಪು ಪಟ್ಟಿಯಲ್ಲಿ ಇರುವ ಕಂಪನಿಗೆ ಗುತ್ತಿಗೆ ನೀಡಿರೋದು ಕಾನೂನು ಬಾಹಿರ ಅಂತ ಬಿಜೆಪಿ ಮುಖಂಡರು ಅರೋಪ ಮಾಡಿದ್ಧಾರೆ.

RELATED ARTICLES

Latest News