ಬೆಂಗಳೂರು,ಜೂ.18-ಅಪಾರ್ಟ್‌ಮೆಂಟ್‌ವೊಂದರ ಮಳೆ ನೀರು ಕೊಯ್ಲು ಇಂಗು ಗುಂಡಿಯಲ್ಲಿ ಅಸ್ತಿಪಂಜರವೊಂದು ಪತ್ತೆಯಾಗಿದೆ.ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಲೇಔಟ್‌ನ ಎಂ.ಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್ ಬಳಿ ಮಳೆ ನೀರು ಕೊಯ್ಲುಗಾಗಿ ಗುಂಡಿ ತೆರೆಯಲಾಗಿದೆ.
2012 ರಿಂದ ಈ ಗುಂಡಿಯನ್ನು ಸ್ವಚ್ಚ ಮಾಡಿರಲಿಲ್ಲ. ಮೊನ್ನೆ ಈ ಗುಂಡಿಯನ್ನು ಸ್ವಚ್ಚ ಮಾಡುತ್ತಿದ್ದಾಗ ಅಸ್ತಿಪಂಜರವೊಂದು ಪತ್ತೆಯಾಗಿದೆ.ಅಸ್ತಿಪಂಜರದಲ್ಲಿ ಪ್ಯಾಂಟ್ ಇರುವುದರಿಂದ ಗಂಡಸಿನ ಅಸ್ತಿಪಂಜರ ಇರಬಹುದೆಂದು ಶಂಕಿಸಲಾಗಿದ್ದು ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ.
ಬೇಗೂರು ಠಾಣೆ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ಈ ಅಸ್ತಿಪಂಜರ ಯಾರದ್ದು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.ಈ ಅಸ್ತಿಪಂಜರ ಈ ಸ್ಥಳದಲ್ಲಿ ಹೇಗೆ ಬಂತು,ಯಾರಾದರೂ ವ್ಯಕ್ತಿಯನ್ನು ಕೊಲೆ ಮಾಡಿ ಇಲ್ಲಿ ತಂದು ಬಿಸಾಡಿರಬಹುದೇ ಅಥವಾ ಕುಡಿದ ಮತ್ತಿನಲ್ಲಿ ಈ ಗುಂಡಿಗೆ ಬಿದ್ದು ಮೃತಪಟ್ಟಿರಬಹುದೇ ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆಕೈಗೊಂಡಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-08-2025)
- 80ರ ವೃದ್ಧನಿಗೆ ಪ್ರೀತಿ ಹೆಸರಲ್ಲಿ ನಾಲ್ವರು ಮಹಿಳೆಯರಿಂದ 9 ಕೋಟಿ ವಂಚನೆ
- ಸವಿತಕ್ಕ ಪುತ್ರನ ಆತಹತ್ಯೆಗೆ “ಡೆತ್ನೋಟ್” ವೆಬ್ಸೀರಿಸ್ ಕಾರಣವಂತೆ..?
- ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೋಕ್
- ಆನ್ಲೈನ್ ಗೇಮ್ಗಾಗಿ ಹಣಕ್ಕೆ ಪೀಡಿಸುತ್ತಿದ್ದ ತಂಗಿ ಮಗನನ್ನೇ ಕೊಂದ ಮಾವ