Homeಜಿಲ್ಲಾ ಸುದ್ದಿಗಳುಜಾತ್ರೆಯಲ್ಲಿ ಹೆಣ್ಣು ಮಕ್ಕಳ ಫೋಟೋ–ವಿಡಿಯೋ ತೆಗೆದರೆ 30 ಸಾವಿರ ರೂ. ದಂಡ

ಜಾತ್ರೆಯಲ್ಲಿ ಹೆಣ್ಣು ಮಕ್ಕಳ ಫೋಟೋ–ವಿಡಿಯೋ ತೆಗೆದರೆ 30 ಸಾವಿರ ರೂ. ದಂಡ

Rs 30,000 fine for taking photos and videos of girls at fair

ಮೈಸೂರು, ಫೆ.10 – ಜಾತ್ರೆಯಲ್ಲಿ ಹೆಣ್ಣು ಮಕ್ಕಳ ವಿಡಿಯೋ ಮಾಡಿದರೆ 30 ಸಾವಿರ ರೂ. ದಂಡ ವಿಧಿಸುವುದಾಗಿ ಡಂಗೂರ ಸಾರಿಸಿ ಊರಿನ ಹಿರಿಯರು ಪರಮಾನು ಹೊರಡಿಸಿದ್ದಾರೆ.ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಲ್ಲಿ ವಿಶೇಷವಾಗಿ ಡಂಗೂರ ಸಾರಿಸಿ ಎಚ್ಚರಿಕೆ ನೀಡಲಾಗಿದೆ.

ಇಂದಿನಿಂದ ಮೂರು ದಿನಗಳ ಕಾಲ ಗ್ರಾಮದೇವತೆ ಜಾತ್ರೆ ನಡೆಯಲಿದ್ದು, ಈ ವೇಳೆ ಕುಡಿದು ಗಲಾಟೆ ಮಾಡಿದರೆ ಹಾಗೂ ಹೆಣ್ಣು ಮಕ್ಕಳ ವಿಡಿಯೋ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸುವುದಾಗಿ ಹಿರಿಯರು ಎಚ್ಚರಿಕೆ ನೀಡಿದ್ದಾರೆ.

30 ದಿನಗಳವರೆಗೆ ಮಾಂಸಾಹಾರ, ಒಗ್ಗರಣೆ ನಿಷೇಧ :
ಹಲವಾರು ವರ್ಷಗಳಿಂದಲೂ ಗ್ರಾಮದೇವತೆ ಮಾರಮ್ಮ ಹಬ್ಬವನ್ನು ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಜಾತ್ರೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಗ್ರಾಮದಲ್ಲಿ ಒಗ್ಗರಣೆ ಹಾಕುವಂತಿಲ್ಲ. ಮಾಂಸಾಹಾರ ಸೇವಿಸುವಂತಿಲ್ಲ ಎಂಬುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

RELATED ARTICLES
spot_img

Latest News