ಬೆಂಗಳೂರು, ಜೂ.21- ಲೈಸೆನ್ಸ್ ನವೀಕರಣ ಹಾಗೂ ಹೊಸ ಪರವಾನಗಿ ಶುಲ್ಕ ಕಡಿಮೆ ಮಾಡಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಮದ್ಯ ಮಾರಾಟಗಾರರ
ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಶುಲ್ಕ ಹೆಚ್ಚಳದಿಂದ ಮದ್ಯ ಮಾರಾಟಕ್ಕೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಶುಲ್ಕ ಹೆಚ್ಚಳ ಕೈ ಬಿಡಬೇಕು ಎಂದು ಸಂಘದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಹಮಿಕೊಂಡಿರುವ ಮದ್ಯ ಮಾರಾಟಗಾರರ ಸಂಘದ ಸಮಾವೇಶದಲ್ಲಿ ಮುಖಂಡರುಗಳು ಈ ಎಚ್ಚರಿಕೆ ನೀಡಿದ್ದಾರೆ.
ಮನಸ್ಸೋ ಇಚ್ಚೆ ಮದ್ಯದ ದರ ಹೆಚ್ಚಳ ಮಾಡುವುದು, ಲೈಸೆನ್ಸ್ ನವೀಕರಣ ಶುಲ್ಕ ಹೆಚ್ಚಳ ಮಾಡುವ ಮೂಲಕ ಸರ್ಕಾರ ನಮ ಸಹನೆ ಕೆಣಕುವ ಕಾರ್ಯಕ್ಕೆ ಕೈ ಹಾಕಿದೆ. ಈ ಕೂಡಲೇ ತಮ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದು ಈ ಹಿಂದೆ ಇದ್ದ ಮಾದರಿಯನ್ನೇ ಮುಂದುವರೆಸಬೇಕು ಇಲ್ಲದಿದ್ದರೆ ರಾಜ್ಯದಲ್ಲಿ ಮದ್ಯ ಮಾರಾಟ ಸ್ಥಗಿತ ಗೊಳಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರುಗಳು ಎಚ್ಚರಿಕೆ ನೀಡಿದ್ದಾರೆ.
- ಪಿಎಂ ಇ-ಡ್ರೈವ್ ಯೋಜನಾ ಅವಧಿ 2 ವರ್ಷ ವಿಸ್ತರಣೆ : ಹೆಚ್.ಡಿ.ಕುಮಾರಸ್ವಾಮಿ
- ಚುನಾವಣಾ ಅಕ್ರಮಗಳ ಕುರಿತ ರಾಹುಲ್ ಆರೋಪಗಳ ತನಿಖೆಗೆ ಮುಂದಾದ ರಾಜ್ಯಸರ್ಕಾರ
- ಹಾಸನದಲ್ಲೊಂದು ಪೈಶಾಚಿಕ ಕೃತ್ಯ : ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
- ಆಪರೇಷನ್ ಅಕಾಲ್ : ಉಗ್ರರರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮ
- ಸೋಮವಾರದಿಂದ ವಿಧಾನಮಂಡಲ ಅಧಿವೇಶನ : ಸದನದಲ್ಲಿ ಪ್ರತಿಧ್ವನಿಸಲಿವೆ ಕಾಲ್ತುಳಿತ, ಒಳ ಮೀಸಲಾತಿ ವಿಚಾರಗಳು