ಶಿವಮೊಗ್ಗ, ಜೂ.22- ತೋಟದ ಮನೆಯಲ್ಲಿ ಮದ್ಯದ ಪಾರ್ಟಿ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಗೌತಮ ನಾಯಕ(22) ಹಾಗೂ ಸಂಜೀವ(22) ಎಂದು ಗುರುತಿಸಲಾಗಿದೆ. ಸುಮಾರು 10 ಮಂದಿ ಸ್ನೇಹಿತರ ತಂಡ ಎಡವಾಲ ಗ್ರಾಮದಲ್ಲಿರುವ ತೋಟದ ಮನೆಗೆ ಬಂದು ಅಲ್ಲಿ ರಾತ್ರಿ ಪಾರ್ಟಿ ನಡೆಸಿದರು.
ತಡರಾತ್ರಿ ಮದ್ಯದ ನಶೆಯಲ್ಲಿ ಒಬ್ಬ ಕೃಷಿ ಹೊಂಡದ ಬಳಿ ಹೋಗಿ ನೀರಿಗೆ ಬಿದಿದ್ದಾನೆ. ಇದನ್ನು ಕಂಡು ಮತ್ತೊಬ್ಬ ಆತನನ್ನು ರಕ್ಷಿಸಲು ನೀರಿಗಿಳಿದು ಆತನೂ ಸಹ ಮುಳುಗಿ ಸಾವನ್ನಪ್ಪಿದ್ದಾನೆ.
ಹೊಂಡದಲ್ಲಿ ಬಿದ್ದವರು ಏನಾದರು ಎಂದು ನೋಡುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಆತಂಕಗೊಂಡ ಇತರ ಸ್ನೇಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದಾವಿಸಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆದಿದೆ.
- BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್-ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂ, ತಕ್ಷಣ ಬಂಧನಕ್ಕೆ ಆದೇಶ
- ಭಾರತ-ಪಾಕ್ ವಿಭಜನೆಯಾದ ಭಯಾನಕ ದಿನವನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ
- ಜಾಗತಿಕ ಪ್ರಕ್ಷುಬ್ಧತೆ ಎದುರಿಸಲು ಆತ್ಮನಿರ್ಭರತೆ ಅಗತ್ಯ ; ಜೈಶಂಕರ್
- ಟ್ರೀಡಿಂಗ್ ಲಿಂಕ್ ಒತ್ತಿ 69 ಲಕ್ಷ ರೂ. ಕಳೆದುಕೊಂಡ ದಂಪತಿ
- ರಾಜಣ್ಣ ವಜಾ ಹಿನ್ನೆಲೆಯಲ್ಲಿ ಕಾಂಗ್ರೆಸ್ನೊಳಗೆ ಬಲಾ-ಬಲ ಪ್ರದರ್ಶನಕ್ಕೆ ಗುಂಪು ರಾಜಕಾರಣ ಶುರು