ನಿತ್ಯ ನೀತಿ : ತೊಂದರೆ ಬಂದಾಗ ಪ್ರಾಮಾಣಿಕವಾಗಿರಿ. ಹಣ, ಐಶ್ವರ್ಯ ಬಂದರೆ ಸರಳವಾಗಿರಿ. ಹಕ್ಕನ್ನು ಪಡೆದ ನಂತರ ವಿನಯವಾಗಿರಿ. ಕೋಪಗೊಂಡಾಗ ಶಾಂತವಾಗಿರಿ.
ಎಂತಹ ಸಂದರ್ಭ ಬಂದರೂ ದೇವರ ಮೇಲೆ ನಂಬಿಕೆ ಇಡಿ. ದೇವರ ಮೇಲಿನ ನಂಬಿಕೆ ಮತ್ತು ನಮ ಒಳ್ಳೆಯತನ, ಉತ್ತಮ ನಡತೆ ನಮಗೆ ಕಾವಲಾಗಿರುತ್ತದೆ.
ಪಂಚಾಂಗ : ಗುರುವಾರ, 03-07-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ವರ್ಷ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಹಸ್ತ / ಯೋಗ: ಪರಿಘ / ಕರಣ: ಬಾಲವ
ಸೂರ್ಯೋದಯ – ಬೆ.05.58
ಸೂರ್ಯಾಸ್ತ – 06.50
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30
ರಾಶಿಭವಿಷ್ಯ :
ಮೇಷ: ನಿಮ್ಮದಲ್ಲದ ತಪ್ಪಿಗೆ ಸಣ್ಣದೊಂದು ಶಿಕ್ಷೆ ಅನುಭವಿಸಬೇಕು. ಹಣದ ಕೊರತೆ ಇರುವುದಿಲ್ಲ.
ವೃಷಭ: ಜೀವನ ಸಂಗಾತಿಯಿಂದ ಆರ್ಥಿಕ ಲಾಭ ಮತ್ತು ಗೌರವ ಪಡೆಯುವಿರಿ.
ಮಿಥುನ: ಪತ್ನಿ ಹಾಗೂ ಮಕ್ಕಳ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.
ಕಟಕ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದು ಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ಸಿಂಹ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾ ಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.
ಕನ್ಯಾ: ಸಿಗುವ ಅವಕಾಶ ವನ್ನು ಸದ್ಬಳಕೆ ಮಾಡಿಕೊಳ್ಳಿ.
ತುಲಾ: ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.
ವೃಶ್ಚಿಕ: ಹಿತಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡುವ ಪ್ರಯತ್ನ ಮಾಡಬಹುದು.
ಧನುಸ್ಸು: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.
ಮಕರ: ನಿಮ್ಮ ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ಕುಂಭ: ನಿರೀಕ್ಷಿತ ಮೂಲಗಳಿಂದ ಆದಾಯ ಬರ ಲಿದೆ.ಅಮೂಲ್ಯ ವಸ್ತುಗಳ ಖರೀದಿಗೆ ಉತ್ತಮ ದಿನ.
ಮೀನ: ವ್ಯಾಪಾರ-ವ್ಯವಹಾರಗಳಲ್ಲಿ ಸಮಾಧಾನಕರ ಆದಾಯ ಬರಲಿದೆ.
- ಬೈಕ್ ಅಪಘಾತದಲ್ಲಿ ಯೋಗ ಗುರು ವಚನಾನಂದ ಶ್ರೀಗಳ ಸಹೋದರ ಸಾವು
- ಹಾಸನದಲ್ಲಿ ನಿಲ್ಲದ ಹೃದಯಾಘಾತ ಸಾವಿನ ಸರಣಿ, ಮೃತರ ಸಂಖ್ಯೆ 31ಕ್ಕೆ ಏರಿಕೆ
- ಹೃದಯಘಾತಕ್ಕೆ ಕೊರೊನಾ ಲಸಿಕೆ ಕಾರಣ ಎಂಬ ಸಿಎಂ ಹೇಳಿಕೆ ತಪ್ಪು ; ಮಜುಂದಾರ್ ಶಾ
- ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದ ಬಿಬಿಎಂಪಿ ಸಿಬ್ಬಂದಿಗಳ ಅಮಾನತು
- ಸಚಿವ ಕೆ.ಎನ್. ರಾಜಣ್ಣ ಅವರಿಗೆ ನೋಟಿಸ್ ನೀಡುವಂತೆ ಕಾಂಗ್ರೆಸ್ ಶಾಸಕರು ಆಗ್ರಹ