ನವದೆಹಲಿ, ಫೆ.11-ಭಾರತದ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹೊಟ್ಟೆ ನೋವಿನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು,ನಾಳೆ ನಮೀಬಿಯಾ ವಿರುದ್ಧದ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಆಡುವುದು ಅನುಮಾನವಾಗಿದೆ.
ಅಭಿಷೇಕ್ ಕಳೆದ ಎರಡು ದಿನಗಳ ಹಿಂದೆಯೇ ಹೊಟ್ಟೆ ಸೋಂಕಿನಿಂದ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಇನ್ನು ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇಂದು ಅವರನ್ನು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಆದರೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸದ್ಯಕ್ಕೆ ಆಡುವುದು ಅನುಮಾನಾಸ್ಪದವಾಗಿದೆ. ಮುಂಬೈನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಅಭಿಷೇಕ್ ಶೂನ್ಯಕ್ಕೆ ಔಟಾಗಿದ್ದರು.
ಭಾರತಕ್ಕೆ ಆದ್ಯತೆ ನಮೀಬಿಯಾ ಪಂದ್ಯವಲ್ಲ,ಆದರೆ ಫೆ.15 ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯ ಮುಖ್ಯವಾಗಿರುತ್ತದೆ.ಹೊಟ್ಟೆಯ ಸೋಂಕು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಶನಿವಾರ ತರಬೇತಿ ವೇಳೆ ಅಥವಾ ಭಾನುವಾರ ಮೈದಾನಕ್ಕೆ ಇಳಿಯುವ ಸ್ಥಿತಿಯಲ್ಲಿರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
ಮಂಗಳವಾರ ಸ್ಯಾಮ್ಸನ್ ನೆಟ್್ಸನಲ್ಲಿ ಬ್ಯಾಟಿಂಗ್ ಮಾಡಿದರು ಮತ್ತು ಬ್ಯಾಟಿಂಗ್ ತರಬೇತುದಾರ ಸೀತಾಂಶು ಕೊಟಕ್ ಅವರೊಂದಿಗೆ ಸಾಕಷ್ಟು ಸಮಯ ಕಳೆದರು, ಅಭಿಷೇಕ್ ಪೂರ್ಣ ಫಿಟ್ನೆಸ್ ಪಡೆಯಲು ವಿಫಲವಾದರೆ ತಂಡದ ಆಡಳಿತ ಮಂಡಳಿಯು ಸ್ಯಾಮ್ಸನ್ ಆಯ್ಕೆ ಮಾಡಲು ಸಿದ್ಧವಾಗಿರಿಸಿಕೊಳ್ಳುತ್ತಿದೆ.
ಆದರೆ ಭಾರತೀಯ ತಂಡದ ಆಡಳಿತ ಮಂಡಳಿ ಫೆಬ್ರವರಿ 15 ರಂದು ಸರಿಹೋಗುತ್ತದೆ ಎಂಬ ಭರವಸೆ ಹೊಂದಿದೆ.ಕಳೆದ ಭಾನುವಾರ ಇಲ್ಲಿ ಮುಖ್ಯತರಬೇತುದಾರ ಗೌತಮ್ ಗಂಭೀರ್ ಅವರ ಮನೆಯಲ್ಲಿ ನಡೆದ ಭೋಜನಕೂಟದಲ್ಲಿ ಭಾಗವಹಿಸಿದ್ದರು ಆದರೆ ಅವರ ಉಳಿದ ತಂಡದ ಸದಸ್ಯರಿಗಿಂತ ಬಹಳ ಮೊದಲೇ ಹೊರಟರು ಎಂದು ತಿಳಿದುಬಂದಿದೆ.
