Friday, July 4, 2025
Homeಅಂತಾರಾಷ್ಟ್ರೀಯ | Internationalರನ್‌ವೇಯಿಂದ ಜಾರಿ ಸೈಡೈವಿಂಗ್ ವಿಮಾನ ಪತನ

ರನ್‌ವೇಯಿಂದ ಜಾರಿ ಸೈಡೈವಿಂಗ್ ವಿಮಾನ ಪತನ

New Jersey plane crash: Skydiving aircraft skids off runway, crashes into trees, 15 hospitalised

ಮನೋ ಟೌನ್‌ಶಿಪ್, ಜು.3– ದಕ್ಷಿಣ ನ್ಯೂಜೆರ್ಸಿಯ ವಿಮಾನ ನಿಲ್ದಾಣದಲ್ಲಿ ಸಣ್ಣ ಸೈಡೈವಿಂಗ್ ವಿಮಾನವೊಂದು ರನ್‌ವೇಯಿಂದ ಜಾರಿ ಸಮೀಪದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದ್ದು ಅದರಲ್ಲಿದ್ದ 15 ಜನರು ಗಾಯಗೊಂಡಿದ್ದಾರೆ.

ಫಿಲಡೆಲ್ಪಿಯಾದ ಆತ್ಮೀಯಕ್ಕೆ ಸುಮಾರು 33.8 ಕಿಲೋಮೀಟರ್ ದೂರದಲ್ಲಿರುವ ಕ್ರಾಸ್ ಕೀಸ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನೆದಿದಿದೆ ಸುಮಾರು 15 ಜನರನ್ನು ಹೊತ್ತೊಯ್ಯುತ್ತಿದ್ದ ಸೆಸ್ನಾ 208 ವಿಮಾನ ಅಪಘಾತಕ್ಕೀಡಾಗಿದೆ ಮತ್ತು ಗಾಯಾಳೂಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟೇಷನ್ ವಕ್ತಾರರು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ವಿಮಾನದ ಅವಶೇಷಗಳು ಅರಣ್ಯ ಪ್ರದೇಶದ ಹಲವಾರು ಕಡೆ ಬಿದ್ದಿವೆ. ಅಗ್ನಿಶಾಮಕ ವಾಹನಗಳು ಮತ್ತು ಇತರ ತುರ್ತು ವಾಹನಗಳು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಂಡಿದೆ.

ನ್ಯೂಜೆರ್ಸಿಯ ಕ್ಯಾಮ್ಮೆನ್‌ನಲ್ಲಿರುವ ಕೂಪ‌ರ್ ಯೂನಿವರ್ಸಿಟಿ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಕಡಿಮೆ ತೀವ್ರ ಗಾಯಗಳಿರುವ ಎಂಟು ಜನರಿಗೆ ಅದರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವಕ್ತಾರ ವೆಂಡಿ ಎ. ಮರಾನೊ ಹೇಳಿದ್ದಾರೆ.ಗಂಭೀರ ಗಾಯಗಳಿರುವ ಇತರ ನಾಲ್ವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದು ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲ.

RELATED ARTICLES

Latest News