Friday, July 4, 2025
Homeಅಂತಾರಾಷ್ಟ್ರೀಯ | Internationalಇಂಡೋನೇಷ್ಯಾದ ಬಾಲಿ ಬಳಿ ದೋಣಿ ಮುಳುಗಿ 43 ಜನ ನಾಪತ್ತೆ

ಇಂಡೋನೇಷ್ಯಾದ ಬಾಲಿ ಬಳಿ ದೋಣಿ ಮುಳುಗಿ 43 ಜನ ನಾಪತ್ತೆ

43 missing after boat capsizes near Bali, Indonesia

ಜಕಾರ್ತಾ, ಜು.3-ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿ ಬಳಿ 65 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಕಳೆದ ರಾತ್ರಿ ಮುಳುಗಿದೆ.ತಡರಾತ್ರಿ ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಹೊರಟ ಕೆಎಂಪಿ ತುನು ಪ್ರತಮ ಜಯ ಹೆಸರಿನ ದೋಣಿ ಸುಮಾರು ಅರ್ಧ ಗಂಟೆಯ ನಂತರ ಮುಳುಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ತಿಳಿಸಿದೆ.

ದೋಣಿಯಲ್ಲಿ 53 ಪ್ರಯಾಣಿಕರು, 12 ಸಿಬ್ಬಂದಿ ಮತ್ತು 14 ಟ್ರಕ್‌ಗಳು ಸೇರಿದಂತೆ 22 ವಾಹನಗಳು ಇದ್ದವು ಎಂದು ವರದಿಯಾಗಿದೆ.ಇದು 50 ಕಿಲೋಮೀಟರ್ ಪ್ರಯಾಣದ ಬಾಲಿಯ ಗಿಲಿಮನುಕ್ ಬಂದರಿಗೆ ಹೋಗುತ್ತಿತ್ತು ಎಂದು ಅಧಕಾರಿಗಳು ತಿಳಿಸಿದ್ದಾರೆ.

ರಾತ್ರಿಯಿಡೀ ರಕ್ಷಣಾ ತಂಡವು ಪ್ರಕ್ಷುಬ್ಧ ಸಮುದ್ರದಲ್ಲಿ ಕಾಣೆಯಾದ ಜನರನ್ನು ಹುಡುಕುತ್ತಿದೆ. ಕೆಲವರು ಈಜಿಕೊಂಡು ದಡ ಸೇರಿದ್ದು ಸುಮಾರು 43 ಪ್ರಯಾಣಿಕರು ಕಾಣೆಯಾಗಿದ್ದಾರೆ.

RELATED ARTICLES

Latest News