ಬೆಂಗಳೂರು, ನ.17- ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಈ ಪೊಗರು, ಬ್ಲಾಕ್‍ಮೆಲ್‍ಗೆಲ್ಲಾ ಹೆದರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರ ಆರೋಪಗಳಿಗೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿ ದರು. ಅವರು ಏನೇನು ಕೇಳುತ್ತಾರೆ ಎಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ. ಅವರ ಮಾತುಗಳಿಗೆ, ಆಚಾರ ವಿಚಾರ ಎಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ. ಇನ್ನೂ ಬೇಕಾದರೂ ನಾವು ಉತ್ತರ ಕೊಡುತ್ತೇವೆ. ಪಟ್ಟಿ ಕೇಳುತ್ತಿದ್ದಾರೆ ಕೊಡೋಣ ಎಂದರು.
ಬೆಂಗಳೂರಿನಲ್ಲಿ ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಸಂಸ್ಥೆಯದು. ದಾಖಲೆ ಮಾಡಿ ಟೆಂಡರ್ ಹಾಕಿದ್ದರು. ಅದನ್ನು ನನ್ನ ಸ್ನೇಹಿತರು ತೆಗೆದುಕೊಂಡಿದ್ದರು. ನಾನು ಅವರಿಂದ ತೆಗೆದುಕೊಂಡು, ಸಹಭಾಗಿತ್ವದಲ್ಲಿ ಮಾಲ್ ಕಟ್ಟಿದ್ದೇನೆ. ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ಎಂದರು.
ಕೆಲಸಕ್ಕಿದ್ದ ಅಂಗಡಿಯಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರ ಬಂಧನ
ಹಿಂದೆ ಎಲ್ಲಾ ಪ್ರಯತ್ನಗಳಾಗಿವೆ. ಬಹುಶಃ ಕುಮಾರಸ್ವಾಮಿಯವರು ಮರೆತಿರಬಹುದು, ಅವರ ತಂದೆ 10-15 ವರ್ಷದ ಹಿಂದೆಯೇ ಜೈರಾಜ್ ಎಂಬ ಅಧಿಕಾರಿಗೆ ಹೇಳಿ ಖಾತೆ ನಿಲ್ಲಿಸಿದ್ದರು. ಏನು ತನಿಖೆ ಮಾಡಿಸಬೇಕೋ ಎಲ್ಲಾ ಮಾಡಿಸಿದ್ದಾರೆ. ಈಗಲೂ ಏನು ಬೇಕಾದರೂ ತನಿಖೆ ಮಾಡಿಸಿ. ನಾನೇನಾದರೂ ತಪ್ಪು ಮಾಡಿದ್ದರೆ ಗಲ್ಲಿಗೆ ಬೇಕಾದರೆ ಹಾಕಿ ಬಿಡಿ. ಅದಕ್ಕೆಲ್ಲಾ ನಾನು ರೆಡಿ ಇದ್ದೇನೆ. ಈ ಪೊಗರು, ಬ್ಲಾಕ್‍ಮೇಲ್‍ಗೆ ಹೆದರಲ್ಲ. ಸಾರ್ವಜನಿಕ ವ್ಯಕ್ತಿ ಯಾಗಿದ್ದೇನೆ. ಏನು ಬೇಕಾದರೂ ದಾಖಲೆ ಕೊಡುತ್ತೇನೆ ಎಂದರು.
ಮಾಲ್ ಕಟ್ಟಿದ್ದು ನಾನನ್ನಲ್ಲ ಜಾಯಿಂಟ್ ವೆಂಚರ್‍ನಲ್ಲಿ ಶೋಭಾ ಡೆವಲಪರ್ಸ್ ಕಟ್ಟಿದ್ದಾರೆ. ಅವರಿಗೆ ಹೇಳುತ್ತೇನೆ ಯಾವ ವಿದ್ಯುತ್ ಕದ್ದಿದ್ದಾರೆ ದಾಖಲೆ ಬಿಡುಗಡೆ ಮಾಡಿ ಎಂದು ಎಂದ ಅವರು, ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.