ಭುವನೇಶ್ವರ,ಜು.3-ಭಾರಿ ಮಳೆ ಹಿನ್ನಲೆಯಲ್ಲಿ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಇಬ್ಬರು ಜನರು ಸಾವನ್ನಪ್ಪಿದ್ದಾರೆ.ಪ್ರಹಾದಲ್ಲಿ ಕೊಚ್ಚಿಗೊಂಡು ಹೋಗಿದ್ದ ಭೋಗ್ರೈ ಬ್ಲಾಕ್‌ನ ಕುಸುಡಾ ಗ್ರಾಮದ ದಿಬಾಕರ್ ಗಿರಿ (90) ಮತ್ತು ರಾಕೇಶ್ ಸಿಂಗ್‌ಎಂಬುವವರ ಮೃತದೇಹವನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಮೃತದೇಹವನ್ನು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಬರ್ಣರೇಖಾ ಸೇರಿದಂತೆ ಹಲವಾರು ನದಿಗಳು ಉಕ್ಕಿ ಹರಿದಿದ್ದು ಪ್ರಸ್ತುತ ನೀರಿನ ಮಟ್ಟ ಕಡಿಮೆಯಾಗುದೆ ಸುಮಾರು 60 ಹಳಿಗಳ ಜನರು ಬಾದಿಯತರಾಗಿದ್ದಾರೆ. ಜಿಲ್ಲೆಯ ಉತ್ತರ ಭಾಗಗಳಲ್ಲಿ ಭಾರೀ ಮಳೆಯಾಗಿದೆ.ನೆರೆಯ ಜಾರ್ಖಂಡ್‌ನ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿರುವುದರಿಂದ ಈ ಗ್ರಾಮಗಳ ಜನರ ಸಂಕಷ್ಟ ಇನ್ನಷ್ಟು ಉಲ್ಬಣಗೊಂಡಿದೆ ಎಂದು ಅವರು ಹೇಳಿದರು.
ಬಾಲಸೋರ್ ಜಿಲ್ಲೆಯ ಬುಧಬಲಂಗ್ ಮತ್ತು ಜಲಕಾ ನದಿಗಳಲ್ಲಿನ ನೀರಿನ ಮಟ್ಟ ಕಡಿಮೆಯಾಗಿದೆ ಭೋಗ್ರೈ, ಬಲಿಯಾಪಾಲ್, ಜಲೇಶ್ವರ ಮತ್ತು ಬಸ್ತಾದಂತಹ ಸೇರಿ ಹಲವು ಪ್ರದೇಶಗಳು ಪ್ರವಾಹದಿಂದ ಪ್ರಭಾವಿತವಾಗಿವೆ.
ಬಾಲಸೋರ್‌ನಲ್ಲಿ ಪ್ರವಾಹವು ಬೆಳೆಗಳು ಮತ್ತು ಮೂಲಸೌಕರ್ಯಗಳಿಗೆ ಗಣನೀಯ ಹಾನಿಯನ್ನುಂಟುಮಾಡಿದೆ, ಅನೇಕ ರಸ್ತೆಗಳು, ಸೇತುವೆಗಳು ಮತ್ತು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತವು ಒಡಿಶಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ತಂಡಗಳನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನಿಯೋಜಿಸಿದೆ.
ಜೈಪುರದಿಂದ ಬಂದ ವರದಿಯ ಪ್ರಕಾರ, ಬೈತರಾಣಿ ಮತ್ತು ಬ್ರಹ್ಮಣಿ ನದಿಗಳಲ್ಲಿನ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ.