ವಾಷಿಂಗ್ಟನ್,ಜು.4- ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ಪ್ರಾಥಮಿಕ ತೆರಿಗೆ ಮತ್ತು ಖರ್ಚು ಮಸೂದೆಗೆ ಅಮೆರಿಕ ಕಾಂಗ್ರೆಸ್‌ನಲ್ಲಿ ಅಂಗೀಕಾರ ದೊರೆತಿದ್ದು, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಟ್ರಂಪ್ ಸರ್ಕಾರಕ್ಕೆ ಮಹತ್ವ ಜಯ ದೊರೆತಿದೆ.
ಡೊನಾಲ್‌್ಡಟ್ರಂಪ್ ಮಹತ್ವಾಕಾಂಕ್ಷೆಯ ಮಸೂದೆಯನ್ನು ಹೌಸ್ ಆಫ್ ರೆಫ್ರೆಸೆಂಟೇಟಿವ್ಸ್ 218-214 ಅಂತರದಿಂದ ಅಂಗೀಕರಿಸಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ಗೆ ದೊಡ್ಡ ಗೆಲುವು ಎಂದು ಪರಿಗಣಿಸಲಾಗುತ್ತಿದೆ. ಇದು ಅವರ ಅಧಿಕಾರಾವಧಿಯ ಪ್ರಮುಖ ಸಾಧನೆ ಎಂದು ಪರಿಗಣಿಸಲಾಗುತ್ತಿದೆ.
ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಿಂದ ಮಸೂದೆಯನ್ನು ಅಂಗೀಕರಿಸಿದ ನಂತರ, ಅದನ್ನು ಅಧ್ಯಕ್ಷರಿಗೆ ಕಳುಹಿಸಲಾಗಿದೆ. ಅವರು ಶೀಘ್ರದಲ್ಲೇ ಅದಕ್ಕೆ ಸಹಿ ಹಾಕಲಿದ್ದಾರೆ. ಒನ್ ಬಿಗ್ ಬ್ಯೂಟಿಫುಲ್ ಬಿಲ್ ಅಂಗೀಕಾರವಾದ ನಂತರ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಇದಕ್ಕೆ ಪ್ರತಿಕ್ರಿಯಿಸಿದರು. ಮಸೂದೆ ಅಂಗೀಕಾರ
ಗೊಂಡ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್, ಅಧ್ಯಕ್ಷ ಟ್ರಂಪ್ ತಮ ಕನಸಿನ ತೆರಿಗೆ ವಿನಾಯಿತಿ ಮತ್ತು ಖರ್ಚು ಕಡಿತ ಮಸೂದೆಗೆ ಸಹಿ ಹಾಕಲು ಯೋಜಿಸುತ್ತಿದ್ದಾರೆ.
800ಕ್ಕೂ ಹೆಚ್ಚು ಪುಟಗಳ ಈ ಮಸೂದೆಯನ್ನು ಅಂಗೀಕರಿಸಲು ಡೊನಾಲ್‌್ಡಟ್ರಂಪ್ ತುಂಬಾ ಶ್ರಮಿಸಿದ್ದಾರೆ. ಹೊಸದಾಗಿ ಅಂಗೀಕರಿಸಲಾದ ಒನ್ ಬಿಗ್ ಬ್ಯೂಟಿಫುಲ್ ಬಿಲ್‌ಅನ್ನು ಅಮೆರಿಕ ನನಗೆ ನೀಡಿದ ಹುಟ್ಟುಹಬ್ಬದ ಅತ್ಯುತ್ತಮ ಉಡುಗೊರೆ ಎಂದು ಶ್ಲಾಘಿಸಿದ ಡೊನಾಲ್‌್ಡ ಟ್ರಂಪ್, ಇದು ಪ್ರಮುಖ ತೆರಿಗೆ ಕಡಿತಗಳು, ಗಡಿ ಭದ್ರತೆ ಮತ್ತು ರೈತರಿಗೆ ಬೆಂಬಲದೊಂದಿಗೆ 2024ರ ಪ್ರಚಾರದ ಭರವಸೆಗಳನ್ನು ಈಡೇರಿಸುತ್ತದೆ ಎಂದು ಹೇಳಿಕೊಂಡರು.
ಏನಿದು ಒನ್ ಬಿಗ್ ಬ್ಯೂಟಿಫುಲ್ ಮಸೂದೆ? ಈ ಮಸೂದೆ ಬಗ್ಗೆ ಅಧ್ಯಕೀಯ ಚುನಾವಣೆ ನಡೆಯುವುದಕ್ಕೂ ಮುನ್ನ ಪ್ರಚಾರದ ಸಭೆಯಲ್ಲಿ ಟ್ರಂಪ್ ಪ್ರಸ್ತಾಪಿಸಿದ್ದರು. ಆ ಪ್ರಕಾರ ಈ ಮಸೂದೆ ಮಿಲಿಟರಿ ವೆಚ್ಚವನ್ನು ಹೆಚ್ಚಿಸುವುದು, ಅಕ್ರಮ ವಲಸಿಗರ ಸಾಮೂಹಿಕ ಗಡೀಪಾರು ಪ್ರಕ್ರಿಯೆಗೆ ಹಣಕಾಸು ಒದಗಿಸುವುದು ಮತ್ತು ಅವರ ಮೊದಲ ಅವಧಿಯ ತೆರಿಗೆ ಪರಿಹಾರವನ್ನು ವಿಸ್ತರಿಸಲು 4.5 ಟ್ರಿಲಿಯನ್ ಅಮೆರಿಕನ್ ಡಾಲರ್ ಅನುದಾನ ನೀಡುವುದು ಇದರಲ್ಲಿ ಸೇರಿದೆ. ಟ್ರಂಪ್ ಅವರ ಈ ಮಸೂದೆಗೆ ಅಮೆರಿಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಟ್ರಂಪ್ ಅವರ ಸ್ವಂತ ರಿಪಬ್ಲಿಕನ್ ಪಕ್ಷದ ಹಲವಾರು ಸದಸ್ಯರು ಅಮೆರಿಕದ ರಾಷ್ಟ್ರೀಯ ಸಾಲ ಮತ್ತು ಆರೋಗ್ಯ ರಕ್ಷಣೆಯ ಮೇಲಿನ ಪರಿಣಾಮ ಸೇರಿದಂತೆ ಹಲವಾರು ಕಾರಣಗಳಿಗಾಗಿ ಮಸೂದೆಯನ್ನು ಟೀಕಿಸಿದ್ದಾರೆ. ಅಲ್ಲದೇ ವಿರೋಧ ಪಕ್ಷದ ಡೆಮೋಕ್ರಾಟ್‌ಗಳ ಪರವಾಗಿ ನಿಂತಿದ್ದಾರೆ. ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕಡಿತಗೊಳಿಸುವ ಮತ್ತು ಸುಮಾರು 3 ಟ್ರಿಲಿಯನ್ ಡಾಲರ್‌ನಷ್ಟು ರಾಷ್ಟ್ರೀಯ ಸಾಲ ಹೆಚ್ಚಾಗುವ ಭೀತಿ ಇದೆ ಎಂದು ಹಲವರ ಅಭಿಪ್ರಾಯವಾಗಿದೆ.
ಈ ಮಸೂದೆ ಫೆಡರಲ್ ಆಹಾರ ಸಹಾಯ ಕಾರ್ಯಕ್ರಮವನ್ನು ಕುಗ್ಗಿಸುತ್ತದೆಯಲ್ಲದೇ, ಕಡಿಮೆ ಆದಾಯ ಹೊಂದಿರುವ ಯುಎಸ್ ನಾಗರಿಕರಿಗಾಗಿ ಜಾರಿ ಮಾಡಲಾಗಿರುವ ಆರೋಗ್ಯ ವಿಮಾ ಯೋಜನೆಗೆ ಅತಿದೊಡ್ಡ ಕಡಿತಗಳನ್ನು ಒತ್ತಾಯಿಸುತ್ತದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ. ಕೆಲವು ಅಂದಾಜಿನ ಪ್ರಕಾರ ಮಸೂದೆಯ ಅಡಿಯಲ್ಲಿ ತಮ ವಿಮಾ ರಕ್ಷಣೆಯನ್ನು ಕಳೆದುಕೊಳ್ಳುವ ಒಟ್ಟು ಅಮೆರಿಕನ ಪ್ರಜೆಗಳ ಸಂಖ್ಯೆ 17 ಮಿಲಿಯನ್ ಎಂದು ಹೇಳಲಾಗಿದೆ. ಹಲವಾರು ಗ್ರಾಮೀಣ ಆಸ್ಪತ್ರೆಗಳು ಕೂಡ ಮುಚ್ಚುವ ನಿರೀಕ್ಷೆಯಿದೆ.
ಬಿಗ್ ಬ್ಯೂಟಿಫುಲ್ ಬಿಲ್ ಎಂದರೇನು? ಸರಳ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳೋದಾದರೆ, 2017ರಲ್ಲಿ ಮಾಡಿದ ತೆರಿಗೆ ಕಡಿತಗಳನ್ನು ಶಾಶ್ವತಗೊಳಿಸಲು ಈ ಹೊಸ ಮಸೂದೆಯನ್ನು ತರಲಾಗಿದೆ. ಈ ಮಸೂದೆಯು ಸುಮಾರು 4.5 ಟ್ರಿಲಿಯನ್ ಡಾಲರ್‌ಗಳ ತೆರಿಗೆ ಕಡಿತವನ್ನು ಒಳಗೊಂಡಿರುವುದರಿಂದ ಅಮೆರಿಕಾಗೆ ಇದು ಬಹಳ ಮುಖ್ಯವಾಗಿದೆ ಎಂದು ಪರಿಗಣಿಸಲಾಗಿದೆ.ಹಿರಿಯ ನಾಗರಿಕರು ಸಹ 6000 ಡಾಲರ್‌ಗಳವರೆಗೆ ತೆರಿಗೆ ಕಡಿತವನ್ನು ಪಡೆಯುವ ಸಾಧ್ಯತೆಯಿದೆ. ಮಕ್ಕಳ ತೆರಿಗೆ ಕ್ರೆಡಿಟ್ ಅನ್ನು ಸಹ 2200 ಡಾಲರ್‌ಗಳಿಗೆ ಹೆಚ್ಚಿಸಬಹುದು.
ಇದರೊಂದಿಗೆ, ಮತ್ತೊಂದು ಪ್ರಮುಖ ವಿಷಯ ಎಂದರೆ, ಗಡಿ ಭದ್ರತೆಗಾಗಿ ಮುನ್ನೂರ ಐವತ್ತು ಬಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಬಹುದು ಎಂದು ಬೆಳಕಿಗೆ ಬಂದಿದೆ.ಈ ಮಸೂದೆಯ ಪ್ರಮುಖ ಲಕ್ಷಣವೆಂದರೆ ವೈದ್ಯಕೀಯ ಮತ್ತು ಆಹಾರ ನೆರವಿನ ಕಡಿತ ಎಂದು ನಂಬಲಾಗಿದೆ. ಸಾಲದ ಮಿತಿಯನ್ನು 5 ಟ್ರಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸಬಹುದು. ಅಧ್ಯಕ್ಷ ಟ್ರಂಪ್ ಅವರ ಮಾತನ್ನು ನಂಬುವುದಾದರೆ, ಒಂದು ಮಸೂದೆಯಿಂದಾಗಿ ತೆರಿಗೆ ಕಡಿತ, ಮಿಲಿಟರಿ ವೆಚ್ಚ ಮತ್ತು ಗಡಿ ಭದ್ರತೆಯನ್ನು ಬಲ ಪಡಿಸಬಹುದು.
- ಆರ್ಸಿಬಿ ವಿಜಯೋತ್ಸವ ದುರಂತ : ತಿಂಗಳು ಕಳೆದರೂ ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ
- ಪೊಲೀಸರ ಮುಂದೆ ಬಂದು 40 ವರ್ಷ ಹಿಂದೆ ತಾನು ಮಾಡಿದ್ದ ಕೊಲೆಯ ರಹಸ್ಯ ಬಿಚ್ಚಿಟ್ಟ ವ್ಯಕ್ತಿ..!
- ಹುಲಿಗಳ ಸಾವು ಪ್ರಕರಣ : ಕರ್ತವ್ಯಲೋಪವೆಸಗಿದ ಡಿಸಿಎಫ್ ಸೇರಿ 3 ಅಧಿಕಾರಿಗಳ ಅಮಾನತಿಗೆ ಖಂಡ್ರೆ ಶಿಫಾರಸು
- ಸಾಲ ವಾಪಸ್ ಕೇಳಿದ ಮಹಿಳೆ ಮನೆಗೆ ಬೆಂಕಿಯಿಟ್ಟ ಸಾಲಗಾರ
- ಹೃದಯಾಘಾತದಿಂದ ಹಾಲಿವುಡ್ ನಟ ಸಾವು